Select Your Language

Notifications

webdunia
webdunia
webdunia
webdunia

ದಲಿತ ಮಹಿಳೆಯನ್ನು ಮದುವೆಯಾದರೆ ರು.3 ಲಕ್ಷ ಪ್ರೋತ್ಸಾಹಧನ

ದಲಿತ ಮಹಿಳೆಯನ್ನು ಮದುವೆಯಾದರೆ ರು.3 ಲಕ್ಷ ಪ್ರೋತ್ಸಾಹಧನ
Bangalore , ಭಾನುವಾರ, 25 ಡಿಸೆಂಬರ್ 2016 (09:45 IST)
ಅಂಬೇಡ್ಕರ್ ಅವರು ಜಾತಿ ವ್ಯವಸ್ಥೆಯನ್ನು ಅರ್ಥಮಾಡಿಕೊಂಡಷ್ಟು ಬೇರೆ ಯಾರೂ ಅರ್ಥಮಾಡಿಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ನಡೆದ ಡಾ. ಬಿ. ಆರ್. ಅಂಬೇಡ್ಕರ್ ಮಹಾ ಪರಿ ನಿರ್ವಾಣ ನಿಮಿತ್ತ “ಬೌದ್ಧ ಸಮಾಜ ನಿರ್ಮಾಣ ಸಂಕಲ್ಪ ದಿನ” ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.
 
ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕು ಎಂಬ ಉದ್ದೇಶದಿಂದ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುತ್ತಿದ್ದೇವೆ. ದಲಿತ ಮಹಿಳೆಯನ್ನು ವಿವಾಹವಾದರೆ 3 ಲಕ್ಷ ರೂ. ಹಾಗೂ ದಲಿತ ಪುರುಷ ಇತರೆ ಜಾತಿ ಮಹಿಳೆ ವಿವಾಹವಾದರೆ 2 ಲಕ್ಷ ರೂ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ಹೇಳಿದರು.
 
2013ರಲ್ಲಿ SCP ಮತ್ತು TSP ಅನುದಾನವನ್ನು ಕಡ್ಡಾಯವಾಗಿ ಈ ಸಮುದಾಯಕ್ಕೆ ಬಳಸಬೇಕು ಎಂದು ಕಾಯಿದೆ ತಂದಿದ್ದೇವೆ. ಹೋದ ವರ್ಷ 6-7 ಸಾವಿರ ಕೋಟಿ ರೂ ಖರ್ಚು ಮಾಡಲಾಗಿದೆ. ನಾವು ಈ ವರ್ಷ 19852 ಕೋಟಿ ರೂಗಳನ್ನು ಈ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದೇವೆ ಎಂದರು.
 
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವರಾದ ಡಾ. ಎಚ್. ಸಿ. ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಧರ್ಮಸೇನ, ಶಾಸಕರಾದ ಪಿ. ಎಂ. ನರೇಂದ್ರಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷೀನಾರಾಯಣ ನಾಗವಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಮುಖಂಡರು ಕೇಂದ್ರದ ಮೇಲೆ ಒತ್ತಡ ಹಾಕಲಿ: ಸಿದ್ದರಾಮಯ್ಯ