ಯುವಕರಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿರುವ ಬೈಕ್ ರಾಯಲ್ ಎನ್‌ಫೀಲ್ಡ್ ಡಿಸೆಂಬರ್‌ನಲ್ಲಿ ಅತ್ಯಧಿಕ ಮಾರಾಟವಾಗಿದೆ. 2015ಕ್ಕೆ ಹೋಲಿಸಿದರೆ ಕಳೆದ ಡಿಸೆಂಬರ್‌ನಲ್ಲಿ ಮಾರಾಟ ಶೇ.42ರಷ್ಟು ಹೆಚ್ಚಾಗಿದೆ ಎಂದು ಐಷರ್ ಮೋಟಾರ್ಸ್ ಪ್ರಕಟಿಸಿದೆ.
2015ರ ಡಿಸೆಂಬರ್‌ನಲ್ಲಿ 40,453 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು. 2016 ಡಿಸೆಂಬರ್ ತಿಂಗಳಲ್ಲಿ 57,398 ಬೈಕ್‍ಗಳು ಮಾರಾಟವಾಗಿವೆ ಎಂದು ಬಿಎಸ್ಇ ಫೈಲಿಂಗ್‍ನಲ್ಲಿ ತಿಳಿಸಿದೆ. 2015ಕ್ಕೆ ಹೋಲಿಸಿದರೆ 2016 ಡಿಸೆಂಬರ್‌ನಲ್ಲಿ ಶೇ.160ರಷ್ಟು ರಫ್ತಾಗಿದೆ ಎನ್ನುತ್ತವೆ ಅಂಕಿಅಂಶಗಳು.
ದೇಶೀಯ ಮಾರುಕಟ್ಟೆಯಲ್ಲಿ ಏಪ್ರಿಲ್-ಡಿಸೆಂಬರ್ ಕಾಲದಲ್ಲಿ 4,88,262 ಬೈಕ್‍ಗಳು ಮಾರಾಟ ಮಾಡಿರುವುದಾಗಿ ಕಂಪನಿ ತಿಳಿಸಿದೆ. ಒಂಬತ್ತು ತಿಂಗಳ ಕಾಲದಲ್ಲಿ ರಫ್ತು ಶೇ.78ರಷ್ಟು ಹೆಚ್ಚಾಗಿದೆ ಎಂದು ರಾಯಲ್ ಎನ್‌ಫೀಲ್ಡ್ ಕಂಪನಿ ಹೇಳಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.