Select Your Language

Notifications

webdunia
webdunia
webdunia
webdunia

ರಿಲಯನ್ಸ್‌ನಿಂದ ಮತ್ತೊಂದು ಹೊಸ 4ಜಿ ಸ್ಮಾರ್ಟ್‌ಫೋನ್

ಎಲ್‌ವೈಎಫ್ ವಿಂಡ್ 7ಎಸ್
ರಿಲಯನ್ಸ್ ರಿಟೇಲ್ ಕಂಪನಿ ಎಲ್‍ವೈಎಫ್ ಬ್ರಾಂಡ್‍ನ ಮತ್ತೊಂದು ಹೊಸ 4ಜಿ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಎಲ್‌ವೈಎಫ್ ವಿಂಡ್ 7ಎಸ್ ಹೆಸರಿನ 4ಜಿ ವಾಯ್ಸ್ ಓವರ್ ಎಲ್‍ಟಿಇ ಬೆಂಬಲಿತ ಈ ಫೋನನ್ನು ದೇಶೀಯ ಮಾರುಕಟ್ಟೆಗೆ ರಿಲೀಸ್ ಮಾಡಿದೆ. 
 
ಇದರ ಬೆಲೆ ರೂ.5,699 ಎಂದು ಕಂಪನಿ ನಿರ್ಧರಿಸಿದೆ. ವಿಂಡ್ 7 ಹೆಸರಿನ ಫೊನ್ ಸಕ್ಸಸ್ ಆದ ಮೇಲೀ ವಿಂಡ್ 7ಎಸ್ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಮತ್ತೊಂದು ಫೋನ್ ಇದು. ಈ ಫೋನ್ ವಿಶೇಷಗಳನ್ನು ನೋಡುವುದಾದರೆ...
 
* 5 ಇಂಚು ಎಚ್‍ಡಿ ಸ್ಪರ್ಶಸಂವೇದಿ ಪರದೆ
* 1.3 ಗಿಗಾ ಹಡ್ಜ್ ಕ್ವಾಡ್ ಕೋರ್ ಕ್ವಾಲ್‌ಕಮ್ ಸ್ನಾಪ್‌ಡ್ರಾಗನ್ 210 ಪ್ರೋಸೆಸರ್
* 2 ಜಿಬಿ ರ್ಯಾಮ್
* 16 ಜಿಬಿ ಆಂತರಿಕ ಮೆಮೊರಿ
* 128 ಜಿಬಿಯವರೆಗೂ ವಿಸ್ತರಿಸಬಹುದಾದ ಮೆಮರಿ
* 8 ಎಂಪಿ ಹಿಂಬದಿ ಕ್ಯಾಮೆರಾ
* 5 ಎಂಪಿ ಮುಂಬದಿ ಕ್ಯಾಮೆರಾ (ಸ್ವಂತಿ ಕ್ಯಾಮೆರಾ)
* 2250 ಎಂಎಎಚ್ ಬ್ಯಾಟರಿ
* 9 ಗಂಟೆಗಳ 4ಜಿ ಟಾಕ್‌ಟೈಮ್, 5 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್, 32 ಗಂಟೆಗಳ ನಾನ್-ಸ್ಟಾಪ್ ಸಂಗೀತವನ್ನು ಈ ಫೋನ್ ಮೂಲಕ ಕೇಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜನತೆಯಿಂದ ಶಿಕ್ಷೆ ಅನುಭವಿಸಲು ಮೋದಿ ಸ್ಥಳ ಆಯ್ಕೆ ಮಾಡಲಿ: ಲಾಲು ಯಾದವ್