Select Your Language

Notifications

webdunia
webdunia
webdunia
webdunia

ಜಿಯೋ ಉಚಿತ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?

ಜಿಯೋ ಉಚಿತ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?
ಮುಂಬೈ , ಶುಕ್ರವಾರ, 21 ಜುಲೈ 2017 (19:52 IST)
ಉಚಿತ ಡೇಟಾ ನೀಡುವ ಮೂಲಕ ಮೊಬೈಲ್ ಡೇಟಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಯಲಯನ್ಸ್ ಜಿಯೋ ಇದೀಗ ಉಚಿತ ಮೊಬೈಲ್ ಫೋನ್ ಘೋಷಿಸುವ ಮೂಲಕ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ರಿಲಯನ್ ಜಿಯೋ ಮಾಲೀಕ ಮುಕೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಉಚಿತ ಮೊಬೈಲ್ ಘೋಷಣೆ ಮಾಡಿದ್ದಾರೆ.

ಮೇಡ್ ಇನ್ ಇಂಡಿಯಾ ರಿಲಯನ್ಸ್ ಜಿಯೋ ಮೊಬೈಲ್ ಪಡೆಯಲು ಗ್ರಾಹಕರು 1500 ರೂ. ಡೆಪಾಸಿಟ್ ಇಡಬೇಕು. 3 ವರ್ಷಗಳ ಬಳಿಕ ಅದನ್ನ ಮತ್ತೆ ಗ್ರಾಹಕರಿಗೆ ವಾಪಸ್ ನೀಡಲಾಗುತ್ತೆ. ಇದರರ್ಥ ಫೋನ್ ಉಚಿತವಾಗಿ ಸಿಗಲಿದೆ.

`0 ಬೆಲೆಯಲ್ಲಿ ಎಲ್ಲ ಭಾರತೀಯರಿಗಾಗಿ ಜಿಯೋ ಫೋನ್ ಘೋಷಣೆ ಮಾಡುತ್ತಿರುವುದು ನನಗೆ ಸಂತಸವಾಗುತ್ತಿದೆ. ಜಿಯೋ ಫೋನ್ ಬಳಕೆದಾರರು 36 ತಿಂಗಳ ಬಳಿಕ ಸಂಪೂರ್ಣ 1500 ರೂ. ಭದ್ರತಾ ಠೇವಣಿಯನ್ನ ಹಿಂಪಡೆಯಲಿದ್ದಾರೆ. ನೀವು ಜಿಯೋ ಫೋನ್`ಗೆ ಯಾವುದೇ ಹಣ ನೀಡುವುದಿಲ್ಲ ಎಂದರ್ಥ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅಂಬಾನಿ ಜೊತೆ ಇದ್ದ ಅವಳಿ ಮಕ್ಕಳಾದ ಇಶಾ ಮತ್ತು ಆಕಾಶ್ ಫೋನಿನ ಫೀಚರ್`ಗಳನ್ನ ಪ್ರಸ್ತುತಪಡಿಸಿದರು. ಕರೆ, ಸಂದೇಶ, ವಾಯ್ಸ್ ಕಮಾಂಡ್, ಇಂಟರ್ನೆಟ್ ಸರ್ಫಿಂಗ್, ಟಿವಿಗೆ ಕನೆಕ್ಟ್ ಮಾಡಿ ಮೊಬೈಲ್ ವಿಷಯ, ವಿಡಿಯೋಗಳನ್ನ ನೋಡಲು ಕೇಬಲ್ ಇದರಲ್ಲಿದೆ. ಆಗಸ್ಟ್ 15ರಂದು  ಬೆಟಾ ಮೊಬೈಲ್ ಲಭ್ಯವಾಗಲಿದ್ದು, ಆಗಸ್ಟ್ 24ಕ್ಕೆ ಪೂರ್ವ ಕಾಯ್ದಿರಿಸುವಿಕೆ ಆರಂಭವಾಗಲಿದೆ. ಸೆಪ್ಟೆಂಬರ್`ಗೆ ಎಲ್ಲರ ಕೈಯಲ್ಲಿ ಜಿಯೋ ಮೊಬೈಲ್ ಇರಲಿದೆ.

ಜಿಯೋ ಮೊಬೈಲ್`ನಲ್ಲಿ ಏನೆಲ್ಲ ಇದೆ ಗೊತ್ತಾ..?

1. ಆಲ್ಫಾ ಅಕ್ಷರಗಳ ಕಿಪ್ಯಾಡ್
2. 2.4 ಇಂಚಿನ QVGA ಡಿಸ್ಪ್ಲೇ
3.  ಎಫ್ಎಂ ರೇಡಿಯೋ
4. ಟಾರ್ಚ್ ಲೈಟ್
5. ಹೆಡ್ ಫೋನ್ ಜಾಕ್
6. ಎಸ್,ಡಿ ಕಾರ್ಡ್ ಸ್ಥಳ
7. ಬ್ಯಾಟರಿ ವಿತ್ ಚಾರ್ಜರ್
8. ನ್ಯಾವಿಗೇಶನ್
9.  ಫೋನ್ ಕಾಂಟ್ಯಾಕ್ಟ್ ಬುಕ್
10. ಕಾಲ್ ಹಿಸ್ಟರಿ ಸೌಲಭ್ಯ
11. ಜಿಯೋ ಆಪ್ಸ್
12. ಮೈಕ್ರೋ ಫೋನ್ ಮತ್ತು ಸ್ಪೀಕರ್
13. ಇನ್ ಬಿಲ್ಟ್ ರಿಂಗ್ ಟೋನ್ಸ್ ಇರುತ್ತವೆ.

webdunia

ಎಲ್ಲವೂ ಅಂದುಕೊಂಡತೆ ಆದರೆ ಸೆಪ್ಟೆಂಬರ್ ವೇಳೆಗೆ ಭಾರತೀಯರಿಗೆ ಉಚಿತ ಮೊಬೈಲ್ ಭಾಗ್ಯ ಸಿಗಲಿದೆ. ಬೇಸಿಕ್ ಮೊಬೈಲ್ ಬಳಸುವ ಗ್ರಾಹಕರು ಸೇರಿದಂತೆ ದೇಶದ ಶೇ.99ರಷ್ಟು ಜನರನ್ನ ತಲುಪುವುದು ಇದರ ಉದ್ದೇಶವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆ ಜೊತೆ ಕಾಮದಾಟವಾಡಿ ಆತ್ಮಹತ್ಯೆಗೆ ಪ್ರೇರೇಪಿಸಿದನಾ ಆ ಶಾಸಕ..?