Select Your Language

Notifications

webdunia
webdunia
webdunia
webdunia

ಉಚಿತ ಕರೆಗಳಿಗೆ ಮಿತಿ ಇಲ್ಲ: ರಿಲಯನ್ಸ್ ಜಿಯೋ

ಉಚಿತ ಕರೆಗಳಿಗೆ ಮಿತಿ ಇಲ್ಲ: ರಿಲಯನ್ಸ್ ಜಿಯೋ
New Delhi , ಗುರುವಾರ, 2 ಮಾರ್ಚ್ 2017 (13:09 IST)
ರಿಲಯನ್ಸ್ ಜಿಯೋ ಸದಸ್ಯತ್ವ (ಪ್ರೈಮ್ ಮೆಂಬರ್‌ಶಿಪ್) ನೋಂದಣಿ ಬುಧವಾರದಿಂದ ಆರಂಭವಾಗಿದೆ. ಈ ತಿಂಗಳು (ಮಾರ್ಚ್) 31ರವರೆಗೂ ಜಿಯೋ ಗ್ರಾಹಕರು ರೂ.99 ಸಲ್ಲಿಸಿ, ಈ ವಾರ್ಷಿಕ ಸದಸ್ಯತ್ವ ಪಡೆಯಬಹುದು. ಆ ಬಳಿಕ ಪ್ರತಿ ತಿಂಗಳು ರೂ.149, 303, 499 ತಿಂಗಳ ರೀಚಾರ್ಜ್‍ನೊಂದಿಗೆ ಅನಿಯಮಿತ ಕರೆಗಳನ್ನು ಉಚಿತವಾಗಿ ಪಡೆಯಬಹುದು. 
 
ಇದರ ಜತೆಗೆ ಡಾಟಾವನ್ನು ಸಂಬಂಧಿಸಿದ ಯೋಜನೆ ಪ್ರಕಾರ ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ. ಜಿಯೋ ಸದಸ್ಯತ್ವ ಪಡೆದವರು, ಯಾವುದೇ ರೀಚಾರ್ಜ್ ಮಾಡಿಸಿಕೊಂಡರೂ, ತಿಂಗಳ ಕಾಲ ಎಲ್ಲವನ್ನೂ ಅನಿಯಮಿತವಾಗಿ, ಉಚಿತವಾಗಿ, ಯಾವುದೇ ಆಪರೇಟರ್‌ಗಾದರೂ ಮಾಡಿಕೊಳ್ಳಬಹುದು.
 
ಕೆಲವು ಯೋಜನೆಗಳ ಮೇಲೆ ಮೊದಲು 1,000 ನಿಮಿಷಗಳು ಮಾತ್ರ ಉಚಿತ ಎಂದು ಬ್ರೋಕರೇಜ್ ಕಂಪೆನಿ ಸಿಎಲ್ಎಸ್ಎ ಬಿಡುಗಡೆ ಮಾಡಿದ ಪತ್ರದಲ್ಲಿ ತಿಳಿಸಿರುವುದು ಸರಿಯಲ್ಲ ಎಂದು ಜಿಯೋ ಸ್ಪಷ್ಟಪಡಿಸಿದೆ. ಗ್ರಾಹಕರು ತಮಗೆ ಅನುಕೂಲವಾದ ರೀಚಾರ್ಚ್ ಆಯ್ಕೆ ಮಾಡಿಕೊಂಡು ಮೊಬೈಲ್‌ನಲ್ಲಿನ ಮೈಜಿಯೋ ಆಪ್ ಆಗಲಿ, ಕಂಪೆನಿ ವೆಬ್‍ಸೈಟ್ www.jio.com ನಲ್ಲಾಗಲಿ ಪರಿಶೀಲಿಸಬಹುದು. ಸಂಬಂಧಿಸಿದ ಮಳಿಗೆಗಳಲ್ಲೂ ಈ ವಿವರಗಲು ಲಭ್ಯ ಎಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಿಯಲನ್ಸ್ ಜಿಯೋ, ಸ್ಯಾಂಸಂಗ್‌ಗೆ ಪ್ರಶಸ್ತಿ ಗರಿ