Select Your Language

Notifications

webdunia
webdunia
webdunia
webdunia

ಜಿಯೋ ’ಪ್ರೈಮ್ ಆಫರ್’ ಪ್ರಕಟ, ಇನ್ನೊಂದು ವರ್ಷ ಮಜಾ ಮಾಡಿ!

ಜಿಯೋ ’ಪ್ರೈಮ್ ಆಫರ್’ ಪ್ರಕಟ, ಇನ್ನೊಂದು ವರ್ಷ ಮಜಾ ಮಾಡಿ!
Mumbai , ಮಂಗಳವಾರ, 21 ಫೆಬ್ರವರಿ 2017 (17:24 IST)
ಜಿಯೋ ಆರಂಭಿಸಿದ 170 ದಿನಗಳಲ್ಲಿ 10 ಕೋಟಿ ಗ್ರಾಹಕರು ಸಿಕ್ಕಿರುವುದು ತುಂಬಾ ಖುಷಿ ಕೊಟ್ಟಿದೆ ಎಂದು ರಿಯಲನ್ಸ್ ಸಂಸ್ಥೆಗಳ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. ಮುಂಬೈನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. ಕಳೆದ 100 ದಿನಗಳಲ್ಲಿ ಸೆಕೆಂಡಿಗೆ ಏಳು ಗ್ರಾಹಕರು ಜಿಯೋ ಸೇವೆಗಳನ್ನು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
 
ಜಿಯೋವನ್ನು ಪ್ರೋತ್ಸಾಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿರುವ ಮುಕೇಶ್, ಏಪ್ರಿಲ್ 1ರಿಂದ ಜಿಯೋ ಟಾರಿಪ್ ಜಾರಿಯಾಗಲಿದೆಯೆಂದು. ದೇಶದಾದ್ಯಂತ ಇರುವ ಯಾವುದೇ ನೆಟ್‌ವರ್ಕ್‌ಗಾದರೂ ಉಚಿತ ಕರೆಗಳ ಸೇವೆ ಮುಂದುವರೆಯಲಿದೆ. ಯಾವುದೇ ರೋಮಿಂಗ್ ಚಾರ್ಚ್, ಬ್ಲಾಕ್ ಔಟ್ ಡೇಸ್ ಇರುವುದಿಲ್ಲಎಂದು ಅವರು ಸ್ಪಷ್ಟಪಡಿಸಿದ್ದಾರೆ. 
 
ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಅತ್ಯುತ್ತಮ ಸೇವೆಗಳನ್ನು ನೀಡುವುದು ಜಿಯೋ ಗುರಿಯಾಗಿದೆ. ಮೊದಲು ಸೇರಿದ 10 ಕೋಟಿ ಜಿಯೋ ಗ್ರಾಹಕರೇ ಜಿಯೋ ಬ್ರಾಂಡ್ ರಾಯಭಾರಿಗಳು. ಮುಂಬರುವ ದಿನಗಳಲ್ಲಿ ಜಿಯೋ ಬಳಕೆದಾರರಿಗೆ ಇನ್ನಷ್ಟು ಪ್ರಯೋಜಗಳು ಸಿಗಲಿವೆ ಎಂದು ಪ್ರಕಟಿಸಿದ್ದಾರೆ.
 
ಗ್ರಾಹಕರಿಗೆ ವರ್ಷಕ್ಕೆ ರೂ.99ರೊಂದಿಗೆ ’ಜಿಯೋ ಪ್ರೈಮ್’ ಹೆಸರಿನಲ್ಲಿ ವಿಶೇಷ ಪ್ಲಾನ್ ಪ್ರಾರಂಭಿಸುತ್ತಿದ್ದೇವೆ. ಜಿಯೋ ಪ್ರೈಮ್ ಗ್ರಾಹಕರು ಕೇವಲ (ದಿನಕ್ಕೆ ರೂ.10) ತಿಂಗಳಿಗೆ ರೂ.303 ಆರಂಭಿಕ ಶುಲ್ಕದೊಂದಿಗೆ ಸೇವೆಗಳನ್ನು ಪಡೆಯಬಹುದು ಎಂದಿದ್ದಾರೆ.
 
2017ರ ವೇಳೆಗೆ ದೇಶದ ಶೇ.99ರಷ್ಟು ಮಂದಿಗ ಜಿಯೋ ಸೇವೆಗಳು ನೀಡಲಿದ್ದೇವೆ. ಜಿಯೋ ನೆಟ್‌ವರ್ಕ್‌ನಲ್ಲಿ ದಿನಕ್ಕೆ 5.5 ಕೋಟಿ ಅವಧಿಯ ವಿಡಿಯೋಗಳನ್ನು ವೀಕ್ಷಿಸುತ್ತಿದ್ದಾರೆ. ಭವಿಷ್ಯದಲ್ಲಿ ಜಿಯೋ ಸೇವೆಗಳನ್ನು ಇನ್ನಷ್ಟು  ಉತ್ತಮವಾಗಿ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದಿದ್ದಾರೆ ಮುಕೇಶ್.
 
 ಕಳೆದ ಆರು ವರ್ಷಗಳಿಂದ ಜಿಯೋ 4ಜಿ ಸೇವೆಗಳನ್ನು ರಚನೆ ಮಾಡುತ್ತಾ ಬಂದಿದ್ದೇವೆ. ದೇಶದ ಇತರೆ ನೆಟ್‍ವರ್ಕ್‌ಗೆ ಹೋಲಿಸಿದರೆ ಸಂಖ್ಯೆಯಲ್ಲಿ ಎರಡುಪಟ್ಟು 4ಜಿ ಟವರ್‌ಗಳು ಜಿಯೋಗಿವೆ. ದೇಶದ ಎಲ್ಲಾ ಪ್ರದೇಶಗಳಿಗೂ ಜಿಯೋ ವಿಸ್ತರಿಸುವ ಬಗ್ಗೆ ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಕರನ ಸಮ್ಮುಖದಲ್ಲಿಯೇ ಪ್ರಿಯತಮೆಯ ಮೇಲೆ ಗ್ಯಾಂಗ್‌ರೇಪ್