Publish Date: Fri, 14 Jul 2017 (18:05 IST)
Updated Date: Fri, 14 Jul 2017 (18:09 IST)
ಭಾರತದ ನೆಟ್ವರ್ಕ್ ಕ್ಷೇತ್ರದಲ್ಲಿ ಹೊಸ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಮತ್ತೊಂದು ಕೊಡುಗೆ ನೀಡಲು ಮುಂದಾಗಿದೆ. ಜುಲೈ 21ರಂದು ಜಿಯೋ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಲಾಂಚ್ ಆಗುತ್ತದೆ ಎನ್ನಲಾಗುತ್ತಿರುವ 500 ರೂ. ಬೆಲೆಯ ಜಿಯೋ ಫೀಚರ್ ಫೋನಿನ ಮಾಹಿತಿಗಳು ಸೋರಿಕೆಯಾಗಿವೆ.
4G VoLTE ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಆಗಿದ್ದು, ಒೆಸ್ ತಂತ್ರಜ್ಞಾನ ಒಳಗೊಂಡಿರುವ ಈ ಫಿಚರ್ ಫೋನ್`ನಲ್ಲಿ ಇಂಟರ್ನೆಟ್ ವರ್ಕ್ ಆಗಲಿದೆ. ಲೈಫ್ ಬ್ಯ್ರಾಂಡ್ ಅಡಿಯಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವ ಈ ಫೀಚರ್ ಫೋನಿನಲ್ಲಿ 2.4 ಇಂಚಿನ ಕಲರ್ ಡಿಸ್ ಪ್ಲೇ. 512 ರ್ಯಾಮ್, 4 ಜಿಬಿ ಇಂಟರ್ನಲ್ ಸ್ಟೋರೇಜ್, 128 ಜಿಬಿವರೆಗೆ ಎಸ್`ಡಿ ಕಾರ್ಡ್ ಸಪೋರ್ಟ್. ಡುಯಲ್ ಸಿಮ್, 2000 ಎಂಎಎಚ್ ಬ್ಯಾಟರಿ, ಬ್ಯಲೂ ಟೂಥ, ಎಫ್ ಎಂ ರೇಡಿಯೋ ಒಳಗೊಂಡಿರುತ್ತದೆ.
ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ ಅಂತ್ಯದ ವೇಳೆಗೆ ಭರ್ಜರಿ ಮೊಬೈಲ್ ಉಡುಗೊರೆ ಸಿಗಲಿದೆ. ಜಿಯೋ ಕಂಪನಿಯಿಂದ ಸ್ತ್ರೀ ಸಾಮಾನ್ಯನಿಗೊಂದು ಭರ್ಜರಿ ಉಡುಗೊರೆ ಸಿಗಲಿದೆ. 500 ರೂ. ಕೊಟ್ಟು ಮೊಬೈಲ್ ಖರೀದಿಸಿ ಇಂಟರ್ನೆಟ್ ಬಳಸುವ ಭಾಗ್ಯ ಸಿಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ