ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 1.34 ಪೈಸೆ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 2.37 ಪೈಸೆಗೆ ಏರಿಕೆ ಮಾಡಲಾಗಿದೆ.
ದೆಹಲಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್ ದರವು ಲೀಟರ್‌ಗೆ 63. 00 ರೂ.ಗಳಾಗಿದ್ದರೆ, ದೆಹಲಿಯಲ್ಲಿಡೀಸೆಲ್ ಒಂದು ಲೀಟರ್‌ಗೆ 50.03 ರೂ.ಗೆ ಮಾರಾಟವಾಗಲಿದೆ ಎಂದು ಐಒಸಿ ಹೇಳಿದೆ.
ಈಗ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿರುವುದು ಸಾಮಾನ್ಯ ಜನತೆಗೆ ಆಕ್ರೋಶ ಉಂಟು ಮಾಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಅಂತಾರಾಷ್ಟ್ರೀಯ ದರಗಳ ಪ್ರಸಕ್ತ ಮಟ್ಟ ಮತ್ತು ರುಪಾಯಿ ಡಾಲರ್ ವಿನಿಮಯ ದರದಿಂದ ದರಗಳಲ್ಲಿ ಪರಿಷ್ಕರಣೆ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಐಒಸಿ ಹೇಳಿಕೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ