Publish Date: Tue, 23 May 2017 (13:09 IST)
Updated Date: Tue, 23 May 2017 (13:22 IST)
ನವದೆಹಲಿ:ಡಿಜಿಟಲ್ ಪೇಮೆಂಟ್ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನ್ನು ಪ್ರಾರಂಭಿಸಿದ್ದು, ಠೇವಣಿ ಮೇಲೆ ವಾರ್ಷಿಕ ಶೇ.4 ರಷ್ಟು ಬಡ್ಡಿ ನೀಡುವುದು ಹಾಗೂ ಕ್ಯಾಶ್ ಬ್ಯಾಕ್ ಆಫರ್, ಉಚಿತ ಆನ್ ಲೈನ್ ವಹಿವಾಟು ಸೇರಿದಂತೆ ಆಕರ್ಷಕ ಸೌಲಭ್ಯಗಳನ್ನು ಘೋಷಿಸಿದೆ.
ಪೇಮೆಂಟ್ಸ್ ಬ್ಯಾಂಕ್ಗಾಗಿ ಪೇಟಿಎಂ 400 ಕೋಟಿ ರೂ. ಗಳನ್ನು ಹೂಡಿಕೆ ಮಾಡುತ್ತಿದೆ. ಮೊದಲ ಶಾಖೆ ನೋಯಿಡಾದಲ್ಲಿ ಉದ್ಘಾಟನೆಯಾಗಿದ್ದು, ಮುಂದಿನ ಒಂದು ವರ್ಷದಲ್ಲಿ 31 ಶಾಖೆಗಳು ಮತ್ತು 3000 ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದೆ.
ಕಳೆದ 48 ಗಂಟೆಗಳಲ್ಲಿ ಪೇಟಿಎಂ ತನ್ನ 2 ಕೋಟಿ 20 ಲಕ್ಷ ಗ್ರಾಹಕರಿಗೆ ಸಂದೇಶ ಕಳುಹಿಸಿದ್ದು, ಪೇಮೆಂಟ್ಸ್ ಬ್ಯಾಂಕ್ನಲ್ಲಿ ಖಾತೆ ತೆರೆಯುವಂತೆ ಮನವಿ ಮಾಡಿದೆ. ಹೊಸ ವಿಧದ ಬ್ಯಾಂಕಿಂಗ್ ಮಾದರಿಯನ್ನು ಆರಂಭಿಸಲು ಆರ್ಬಿಐ ನಮಗೆ ಅವಕಾಶ ನೀಡಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನಲ್ಲಿ ಇಡಲಾಗುವ ಠೇವಣಿ ಹಣವನ್ನು ಸರ್ಕಾರಿ ಬಾಂಡ್ಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ನ ಅಧ್ಯಕ್ಷ ವಿಜಯ್ ಶೇಖರ್ ಶರ್ಮಾ ತಿಳಿಸಿದ್ದಾರೆ.