Select Your Language

Notifications

webdunia
webdunia
webdunia
webdunia

ಮೊಬೈಲ್‌ನಲ್ಲಿ ಪ್ಯಾನಿಕ್ ಬಟನ್: ಮೊಬೈಲ್ ಕಂಪೆನಿಗಳೊಂದಿಗೆ ಸಚಿವ ಪ್ರಸಾದ್ ಚರ್ಚೆ

ಮೊಬೈಲ್‌ನಲ್ಲಿ ಪ್ಯಾನಿಕ್ ಬಟನ್: ಮೊಬೈಲ್ ಕಂಪೆನಿಗಳೊಂದಿಗೆ ಸಚಿವ ಪ್ರಸಾದ್ ಚರ್ಚೆ
ನವದೆಹಲಿ , ಶುಕ್ರವಾರ, 29 ಏಪ್ರಿಲ್ 2016 (16:21 IST)
ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಸಂದರ್ಭಕ್ಕೆ ಸಹಾಯಕವಾಗುವಂತೆ ಪ್ಯಾನಿಕ್ ಬಟನ್‌ ಅಳವಡಿಕೆ ಕಡ್ಡಾಯಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ಗಳ ದರ ಹೆಚ್ಚಳವಾಗಲಿದ್ದು, ಮೊಬೈಲ್ ಉತ್ಪಾದಕ ಕಂಪೆನಿಗಳೊಂದಿಗೆ ಚರ್ಚಿಸುವುದಾಗಿ ಟೆಲಿಕಾಂ ಖಾತೆ ಸಚಿವ ಶಂಕರ್ ಪ್ರಸಾದ್ ಹೇಳಿದ್ದಾರೆ
ನಾನು ಮೊಬೈಲ್ ಉತ್ಪಾದಕ ಸಂಸ್ಥೆಗಳ ಜೊತೆಯಲ್ಲಿ ಮಾತನಾಡುತ್ತೇನೆ. ಭಾರತ ದೇಶ ಅತಿದೊಡ್ಡ ಸ್ಮಾರ್ಟ್‌ಪೋನ್ ಮಾರುಕಟ್ಟೆಯನ್ನು ಹೊಂದಿದೆ. ಸಲಹೆಗಳ ಮೇರೆಗೆ ಎಲ್ಲ ಸ್ಮಾರ್ಟ್‌ಪೋನ್ ಉತ್ಪಾದಕ ಸಂಸ್ಥೆಗಳ ಜೊತೆ ಚರ್ಚೆ ನಡೆಸಿರುವೆ. ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಾಮಾಜಿಕ ನ್ಯಾಯ ಮತ್ತು ಮಹಿಳೆಯರು ಭದ್ರತಾ ಹಿತದೃಷ್ಟಿಯಿಂದ ಬೆಂಬಲ ನೀಡುತ್ತವೆ ಎಂದು ಶಂಕರ್ ಪ್ರಸಾದ ನಿರೀಕ್ಷೆ ವ್ಯಕ್ತವಡಿಸಿದ್ದಾರೆ.
 
ಮುಂದಿನ ವರ್ಷ ಜನವರಿಯಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ಮೊಬೈಲ್ ಫೋನ್ ಗಳಲ್ಲಿ ತುರ್ತು ಸಂದರ್ಭಕ್ಕೆ ಸಹಾಯಕವಾಗುವಂತೆ ಪ್ಯಾನಿಕ್ ಬಟನ್‌ನ್ನು ಅಳವಡಿಕೆ ಕಡ್ಡಾಯ ಎಂದು ಸರಕಾರ ಆದೇಶ ಹೊರಡಿಸಿದೆ. 
 
ಪ್ಯಾನಿಕ್ ಬಟನ್ ಎಂದರೆ, ಪೋನ್‌ಗಳ ಮೇಲೆ ಸುರಕ್ಷತೆ ಒಂದು ಬಟನ್ ಅಳವಡಿಸುವುದು, ಮಹಿಳೆಯರು ಅಪಾಯದಲ್ಲಿ ಸಿಲುಕಿದ್ದಾಗ ಅಥವಾ ಯಾರಾದರೂ ಕಿರುಕುಳ ನೀಡುವ ಸಂದರ್ಭದಲ್ಲಿ ಪ್ಯಾನಿಕ ಬಟನ್‌ನ್ನು ಪ್ರೆಸ್ ಮಾಡಿದರೆ ಸಾಕು, ಸ್ಥಳೀಯ ಪೋಲಿಸ್ ಠಾಣೆ ಅಥವಾ ತನ್ನ ಕುಟುಂಬದ ಶಿಫಾರಸಿನ್ನ ಸಂಖ್ಯೆಗೆ ಸ್ವಯಂ ಚಾಲಿತವಾಗಿ ಸಂದೇಶ ರವಾನೆಯಾಗುತ್ತದೆ. ಈ ಯೋಜನೆ 2017 ರ ಜನವರಿ ತಿಂಗಳಿಂದ ಜಾರಿಗೆ ಬರಲಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಿಯಾರನ್ನು ಬಂಧಿಸಿ: ಬಿಜೆಪಿಗೆ ಕೇಜ್ರಿವಾಲ್ ಸವಾಲು