Select Your Language

Notifications

webdunia
webdunia
webdunia
webdunia

ಚೀನಾದಿಂದ ಎಂಟು ಸಬ್‌ಮರೀನ್‌ ಖರೀದಿಸಲಿರುವ ಪಾಕಿಸ್ತಾನ

ಚೀನಾದಿಂದ ಎಂಟು ಸಬ್‌ಮರೀನ್‌ ಖರೀದಿಸಲಿರುವ ಪಾಕಿಸ್ತಾನ
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (12:36 IST)
ಪಾಕಿಸ್ತಾನ 2028ರೊಳಗೆ 5 ಬಿಲಿಯನ್ ಡಾಲರ್ ವೆಚ್ಚದಲ್ಲಿ  ಚೀನಾ ರಾಷ್ಟ್ರದಿಂದ ಎಂಟು ಪರಿವರ್ತಿತ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಗಳನ್ನು ಖರೀದಿಸುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ದೈತ್ಯ ಕಮ್ಯುನಿಸ್ಟ್ ರಾಷ್ಟ್ರದೊಂದಿಗೆ ಮಾಡಿಕೊಂಡಿರುವ ದೊಡ್ಡ ಶಸ್ತ್ರಾಸ್ತ್ರ ರಫ್ತು ಒಪ್ಪಂದ ಎಂದು ಹೇಳಲಾಗುತ್ತಿದೆ. 
 
ಸುದ್ದಿ ಮಾಧ್ಯಗಳ ಪ್ರಕಾರ, ನೌಕಾಸೇನೆಯ ಅಧಿಕಾರಿಗಳು ಆಗಸ್ಟ್ 26 ರಂದು, ಮುಂದಿನ ಪೀಳಿಗೆಯ ಮಹತ್ವದ ಯೋಜನೆಯ ಬಗ್ಗೆ ಸಂಸದೀಯ ಸಮಿತಿಗೆ ವಿವರಣೆ ನೀಡಿದ್ದು, ಸಬ್‌ಮರೀನ್‌ಗಳ ಖರೀದಿಗೆ 4 ರಿಂದ 5 ಬಿಲಿಯನ್ ಡಾಲರ್‌ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
 
ನೌಕ ಸೇನೆ ಅಧಿಕಾರಿಗಳು ನೀಡಡಿರುವ ಈ ಹೇಳಿಕೆ ಮುಂದಿನ ಪೀಳಿಗೆಯ ಪರಿವರ್ತಿತ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿಗಳನ್ನು ಕೊಳ್ಳುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ ಎಂದು ಹೇಳಿರುವುದನ್ನು ಪಾಕಿಸ್ತಾನ ರಾಷ್ಟೀಯ ರೇಡಿಯೋ ವರದಿ ಮಾಡಿದೆ.
 
ಪ್ರಸಕ್ತ ಸಾಲಿನ ಏಪ್ರಿಲ್‌ ತಿಂಗಳಲ್ಲಿ ಪಾಕಿಸ್ತಾನ ನೌಕಾಪಡೆ ಕರಾಚಿ ಶಿಪ್ ಯಾರ್ಡ್ ಮತ್ತು ಎಂಜಿನಿಯರಿಂಗ್ ವರ್ಕ್ಸ್‌ನ  ಹಿರಿಯ ಅಧಿಕಾರಿಯೊಬ್ಬರು, ಕಂಪೆನಿಗೆ ಎಂಟು ಸಬ್‌ಮರೀನ್‌ಗಳಲ್ಲಿ ನಾಲ್ಕು ಸಬ್‌ಮರೀನ್‌ಗಳನ್ನು ಸಿದ್ದಪಡಿಸುವ ಗುತ್ತಿಗೆ ದೊರೆತಿದ್ದು, ಸಬ್‌ಮರೀನ್‌ಗಳಲ್ಲಿ ಎಐಪಿ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
 
ಎಲ್ಲಾ ಸಮಯದಲ್ಲಿ ಪಾಕಿಸ್ತಾನ ನಮ್ಮ ಸ್ನೇಹಿತ ಎಂದು ಹೇಳಿಕೊಳ್ಳುವ ಚೀನಾ, ಯೋಜನೆಯ ವೆಚ್ಚವನ್ನು ಭರಿಸುವ ಸಹಾಯಕ್ಕೆ ಇಳಿದಿದ್ದು, ಕಡಿಮೆ ಬಡ್ಡಿ ದರದಲ್ಲಿ ದೀರ್ಘಾವಧಿಯ ಸಾಲವನ್ನು ವಿಸ್ತರಿಸುವ ಸಾಧ್ಯತೆ ಇದೆ ವರದಿಯಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸಪ್‌ ಹಂಚಿಕೆ ನೀತಿ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್