ಎಲ್‌ಪಿಜಿ ಸಿಲಿಂಡರ್‌ಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡುವ ಗ್ರಾಹಕರಿಗೆ ಶೇ.5 ರಷ್ಟು ರಿಯಾಯಿತಿ ನೀಡುವುದಾಗಿ ತೈಲ ಕಂಪೆನಿಗಳು ಘೋಷಿಸಿವೆ.
ಸಿಲಿಂಡರ್‌ಗಾಗಿ ಬುಕ್ ಮಾಡುವ ಗ್ರಾಹಕರು ನೆಟ್‌ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಪಾವತಿ ಮಾಡಿದಲ್ಲಿ ಶೇ.5 ರಷ್ಟು ರಿಯಾಯಿತಿ ದೊರೆಯಲಿದೆ ಎಂದು ತೈಲ ಕಂಪೆನಿಗಳು ತಿಳಿಸಿವೆ.
ಗ್ರಾಹಕರು ಆನ್‌ಲೈನ್ ಪಾವತಿ ಮಾಡುವಾಗ ನಿವ್ವಳ ಮೊತ್ತದಲ್ಲಿ ಶೇ, 5 ರಷ್ಟು ರಿಯಾಯಿತಿಯನ್ನು ಕಡಿತಗೊಳಿಸಿ ಉಳಿದ ಮೊತ್ತವನ್ನು ಸ್ಕ್ರೀನ್ ಮೇಲೆ ಕಾಣಿಸುತ್ತದೆ. ಅಲ್ಲಿ ಕಾಣಿಸುವ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದೆ.
ಕೇಂದ್ರ ಸರಕಾರದ ನಗದುರಹಿತ ಹಣದ ವಹಿವಾಟು, ಡಿಜಿಟಲ್ ವಹಿವಾಟಿಗೆ ಉತ್ತೇಜನ ನೀಡಲು ತೈಲ ಕಂಪೆನಿಗಳು ಅಡುಗೆ ಅನಿಲ ಬಳಸುವ ಗ್ರಾಹಕರಿಗೆ ಶೇ.5 ರಷ್ಟು ರಿಯಾಯಿತಿ ನೀಡಲು ನಿರ್ಧರಿಸಿವೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.