Select Your Language

Notifications

webdunia
webdunia
webdunia
webdunia

ಫೇಸ್‌ಬುಕ್‌ನಲ್ಲಿ 360 ಡಿಗ್ರಿ ವೀಡಿಯೊಗಳನ್ನು ಲೈಕ್ ಮಾಡಬಹುದಂತೆ..!

ಫೇಸ್‌ಬುಕ್‌ನಲ್ಲಿ 360 ಡಿಗ್ರಿ ವೀಡಿಯೊಗಳನ್ನು ಲೈಕ್ ಮಾಡಬಹುದಂತೆ..!
ನವದೆಹಲಿ , ಶುಕ್ರವಾರ, 24 ಜೂನ್ 2016 (18:41 IST)
ಸಾಮಾಜಿಕ ಜಾಲತಾಣವಾಗಿರುವ ದೈತ್ಯ ಫೇಸ್‌ಬುಕ್ ಒಡೆತನದ ಒಕ್ಯೂಲಸ್ ಸಂಸ್ಥೆ, ವಿಆರ್ ಹೆಡ್ಸೆಟ್‌ಗಳಲ್ಲಿ 360 ಡಿಗ್ರಿ ವೀಡಿಯೊ ಪ್ರತಿಕ್ರಿಯೆ ನೀಡುವ ವೈಶಿಷ್ಟ್ಯವನ್ನು ಪ್ರಸ್ತುತ ಪಡಿಸಿದೆ. ಇದೀಗ, ಬಳಕೆದಾರರು ವೀಡಿಯೊ ವೀಕ್ಷಿಸುವಾಗ ಲೈಕ್ ಮಾಡಬಹುದಾಗಿದೆ.
 
ಸ್ಯಾಮಸುಂಗ್ ವಿಆರ್ ಗೂಗ್ಗಲ್ಸ್  ಬಳಸಿಕೊಂಡು ವೀಡಿಯೊ ವೀಕ್ಷಿಸುವ ಬಳಕೆದಾರರು, ವೀಡಿಯೊಗಳಿಗೆ ಲೈಕ್ ಸೇರಿದಂತೆ ಹೊಸ ಐದು ಎಮೋಜಿಗಳನ್ನು ಬಳಸಿಕೊಂಡು ಉತ್ತಮ ಪ್ರತಿಕ್ರಿಯೆ ನೀಡಲು ಸಾಧ್ಯವಾಗಿದೆ. 360 ಡಿಗ್ರಿ ವೀಡಿಯೊ ವೀಕ್ಷಿಸುವ ಸಂದರ್ಭದಲ್ಲಿ ಬಳಕೆದಾರರು ವೀಡಿಯೊ ಕುರಿತು ಬೇರೆ ಬಳಕೆದಾರರು ನೀಡಿರುವ ಪ್ರತಿಕ್ರಿಯೆಗಳನ್ನು ಕಾಣಬಹುದಾಗಿದೆ. 
 
ಮೇ ತಿಂಗಳಲ್ಲಿ ದೈತ್ಯ ಫೇಸ್‌ಬುಕ್ ಸಾಮಾಜಿಕ ಜಾಲತಾಣ 3ಡಿ ಆಡಿಯೋ ಮೂಲಕ ಉತ್ತಮ ಸಿನಿಮೀಯ ಮತ್ತು ಗೇಮಿಂಗ್ ಅನುಭವ ನೀಡಲು ಎಡಿನ್ಬರ್ಗ್ ಮೂಲದ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ, ಜೂನ್ 30 ರಿಂದ ಗ್ರಾಹಕರಿಗೆ ತಲುಪಲಿದೆ ಫ್ರೀಡಂ 251 ಸ್ಮಾರ್ಟ್‌ಫೋನ್