Select Your Language

Notifications

webdunia
webdunia
webdunia
webdunia

ರೈತರಿಗೆ ವರವಾಗಲಿರುವ ರೈಸ್‌ಎಕ್ಸ್‌ಪರ್ಟ್ ಮೊಬೈಲ್ ಆಪ್

ರೈತರಿಗೆ ವರವಾಗಲಿರುವ ರೈಸ್‌ಎಕ್ಸ್‌ಪರ್ಟ್ ಮೊಬೈಲ್ ಆಪ್
ನವದೆಹಲಿ , ಮಂಗಳವಾರ, 10 ಮೇ 2016 (11:23 IST)
ಮಾನವ ಜೀವನದ ಅವಿಭಾಜ್ಯ ಭಾಗವಾಗಿರುವ ತಂತ್ರಜ್ಞಾನ, ಕೃಷಿ ಕ್ಷೇತ್ರವನ್ನು ಆವರಿಸಿಕೊಂಡಿದೆ. ರಾಷ್ಟ್ರೀಯ ಭತ್ತ ಸಂಶೋಧನೆ ಸಂಸ್ಥೆ (ಎನ್‌ಆರ್‌ಆರ್‌ಐ) ಕೃಷಿ ಪದ್ಧತಿಗಳ ಮಾಹಿತಿ ಸಂಬಂಧಿತ "ರೈಸ್‌ಎಕ್ಸ್‌ಪರ್ಟ್‌" ಮೊಬೈಲ್ ಅಪ್ಲಿಕೇಶನ್‌ ಅಭಿವೃದ್ಧಿ ಪಡಿಸಿದೆ.
ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ರೈತರಿಗೆ ವಿವಿಧ ಕೃಷಿ ಕ್ಷೇತ್ರದಲ್ಲಿ ಕೀಟದ ಪಿಡುಗು, ಪೋಷಕಾಂಶ, ಕಳೆ, ನೆಮಟೋಡ್ ಮತ್ತು ಬೆಳೆ ರೋಗ-ಸಂಬಂಧಿತ ಪರಿಹಾರವನ್ನು ನೈಜ ಸಮಯದಲ್ಲಿ ನೀಡುತ್ತದೆ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ತಿಳಿಸಿದ್ದಾರೆ.
 
ಪಿಟಿಐ ವರದಿಗಳ ಪ್ರಕಾರ, ಈ ಹೊಸ ವೈಶಿಷ್ಟ್ಯದ ಮೊಬೈಲ್ ಆಪ್ ವೆಬ್ ಆಧಾರಿತ ಅಪ್ಲಿಕೇಶನ್ ಆಗಿದ್ದು, ಈ ಆಪ್ ಮೂಲಕ ರೈತರು ತಮ್ಮ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಫಾರ್ಮ್ ವಿಜ್ಞಾನಿಗಳಿಂದ ಸುಗಮ ಪರಿಹಾರ ಪಡಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
 
ರೈಸ್‌ಎಕ್ಸ್‌ಪರ್ಟ್ ಮೊಬೈಲ್ ಮೂಲಕ ರೈತರು ಪೋಟೋ ಮತ್ತು ವೈಸ್ ಮೆಸೆಜ್‌ಗಳನ್ನು ಕಳುಹಿಸಬಹುದಾಗಿದ್ದು, ಈ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ರೈತರಿಗೆ ವರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಶಾಕಿಂಗ್: ತುಂಡುಡುಗೆ ತೊಟ್ಟು ಯುವಕರ ಜತೆ ಓಡಾಡಿದ್ದಕ್ಕೆ ಥಳಿತ