Select Your Language

Notifications

webdunia
webdunia
webdunia
webdunia

ಶಾಕಿಂಗ್: ತುಂಡುಡುಗೆ ತೊಟ್ಟು ಯುವಕರ ಜತೆ ಓಡಾಡಿದ್ದಕ್ಕೆ ಥಳಿತ

ಶಾಕಿಂಗ್: ತುಂಡುಡುಗೆ ತೊಟ್ಟು ಯುವಕರ ಜತೆ ಓಡಾಡಿದ್ದಕ್ಕೆ ಥಳಿತ
ಪುಣೆ , ಮಂಗಳವಾರ, 10 ಮೇ 2016 (11:01 IST)
ತುಂಡುಡುಗೆ ತೊಟ್ಟು ಯುವಕರ ಜತೆ ಓಡಾಡಿದ್ದಕ್ಕೆ 22 ವರ್ಷದ ಯುವತಿಯೊಬ್ಬಳನ್ನು ಮನಬಂದಂತೆ ಥಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
 
ಪೀಡಿತ ಯುವತಿ ಇಬ್ಬರು ಯುವಕರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಳು. ಕಾರನ್ನು ತಡೆದು ನಿಲ್ಲಿಸಿದ ದುರುಳರ ಗುಂಪೊಂದು ಯುವತಿಯನ್ನು ಹೊರಕ್ಕೆ ಎಳೆದು ತುಂಡುಡುಗೆ ತೊಟ್ಟು ಒಂದೇ ಸಮಯಕ್ಕೆ ಇಬ್ಬರು ಯುವಕರ ಜತೆ ಓಡಾಡುತ್ತೀಯಾ? ಪುಣೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದ ಹೇಳಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ.
 
ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರಲ್ಲಿ ಬಂದಿರುವ ಸುದ್ದಿಯ ಪ್ರಕಾರ ಮೇ 1 ರಂದು ನಸುಕಿನ ಜಾವ ಈ ಘಟನೆ ನಡೆದಿದ್ದು ತನ್ನ ಸ್ನೇಹಿತೆಯ ಮದುವೆಗಾಗಿ ಸಂಗೀತ ಕರ್ಯಕ್ರಮದ ರಿಹರ್ಸಲ್ ಮುಗಿಸಿ ಯುವತಿ ಹಿಂತಿರುಗುತ್ತಿದ್ದಳು. 
 
ದಾರಿ ಮಧ್ಯೆ ಮತ್ತೊಂದು ಕಾರಿನಲ್ಲಿದ್ದ ಯುವಕನೊಬ್ಬ ಕಿಟಕಿಯಿಂದಲೇ ಯುವತಿ ಮತ್ತು ಆಕೆಯ ಸ್ನೇಹಿತರನ್ನು ನಿಂದಿಸಲು ಪ್ರಾರಂಭಿಸಿದ. ಬಳಿಕ ಕಾರನ್ನು ಅಡ್ಡಗಟ್ಟಿ ಆಕೆಯನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿಲಾಯಿತು. ತಮ್ಮ ಹೆಸರು ಮತ್ತು  ಫೋನ್ ನಂಬರ್ ಹೇಳಿದ ದುಷ್ಕರ್ಮಿಗಳು ನಿಮ್ಮಿಂದ ನಮಗೆ ಏನೂ ಮಾಡಲು ಸಾದ್ಯವಿಲ್ಲ ಎಂದು ಹೇಳಿದರು ಎನ್ನಲಾಗಿದೆ.
 
ತನ್ನ ಸ್ನೇಹಿತರು ಸಹಾಯಕ್ಕೆ ಬರದಿದ್ದರೆ ಅವರು ನನ್ನ ಮೇಲೆ ಅತ್ಯಾಚಾರ ಮಾಡಿ ಬಿಡುತ್ತಿದ್ದರು ಎಂಬ ಆತಂಕ ಎದುರಾಗಿತ್ತು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
 
ಆರೋಪಿಗಳಾದ ಅಮಿತ್ ಮುಖೇಂದರ್ ಮತ್ತು ಶುಭಂ ಗುಪ್ತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಲೆನೊವೊ ಝಡ್-1 ಸ್ಮಾರ್ಟ್‌ಪೋನ್‌ ಭಾರತದ ಮಾರುಕಟ್ಟೆಗೆ