Select Your Language

Notifications

webdunia
webdunia
webdunia
webdunia

ನೋಕಿಯಾದಿಂದ ಮತ್ತಷ್ಟು ಫೋನ್‌ಗಳು

ನೋಕಿಯಾದಿಂದ ಮತ್ತಷ್ಟು ಫೋನ್‌ಗಳು
New Delhi , ಶುಕ್ರವಾರ, 13 ಜನವರಿ 2017 (11:33 IST)
ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ರೀ-ಎಂಟ್ರಿ ಕೊಟ್ಟಿರುವ ನೋಕಿಯಾ ಈಗ ಮತ್ತಷ್ಟು ಉತ್ಸಾಹ ತೋರುತ್ತಿದೆ. ಇತ್ತೀಚೆಗೆ ನೋಕಿಯಾ 6 ಹೆಸರಿನ ಆಂಡ್ರಾಯ್ಡ್ ಮೊಬೈಲನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈಗ ಇನ್ನಷ್ಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಹೊರಟಿದೆ.
 
ಈ ವರ್ಷ ಕನಿಷ್ಟ 5 ಫೋನ್‌ಗಳನ್ನು ಬಿಡುಗಡೆ ಮಾಡಲು ವೇದಿಕೆ ಸಿದ್ಧ ಮಾಡಿಕೊಂಡಿದೆ ಎನ್ನುತ್ತಿವೆ ಮೂಲಗಳು. ಶೀಘ್ರದಲ್ಲೇ ನೋಕಿಯಾ 6 ಮಾರುಕಟ್ಟೆಗೆ ಬರುತ್ತಿದ್ದು, ಫೆಬ್ರವರಿ 26ರಂದು ಇನ್ನಷ್ಟು ಮೊಬೈಲ್‌ಗಳು ಪ್ರಕಟವಾಗಲಿವೆ, ದಿನಾಂಕ ಜ್ಞಾಪಕದಲ್ಲಿಟ್ಟುಕೊಳ್ಳಿ ಎಂಬ ಸಂದೇಶವನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿದೆ. 
 
 ಫೆಬ್ರವರಿ 27ರಂದು ಬಾರ್ಲಿಲೋನಾದಲ್ಲಿ ನಡೆಯುವ ಮೊಬೈಲ್ ಕಾಂಗ್ರೆಸ್‌‌ಗೂ ಒಂದು ದಿನ ಮುಂಚಿತವಾಗಿ ಈ ಪ್ರಕಟಣೆ ಇರುತ್ತದೆ. ಒಟ್ಟಾರೆ ನೋಕಿಯಾ ಫೋನ್‌ಗಳು ಮತ್ತೆ ಮಾರುಕಟ್ಟೆಯಲ್ಲಿ ಸದ್ದು ಮಾಡುವ ದಿನಗಳು ದೂರವಿಲ್ಲ. ಈಗಾಗಗಲೆ ಬಿಡುಗಡೆಯಾಗಿರುವ ನೋಕಿಯಾ 6 ಮೊಬೈಲ್ ಮಾರಾಟ ಜನವರಿ 19ರಿಂದ ಆರಂಭವಾಗಲಿದೆ. ಇದರ ಬೆಲೆ ಸುಮಾರು ರೂ.17 ಸಾವಿರ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಂಗ್ ನಿರ್ಗಮಿಸಿದರೂ ದೆಹಲಿಯಲ್ಲಿ ಮುಂದುವರೆದ 'ಜಂಗ್'