Select Your Language

Notifications

webdunia
webdunia
webdunia
webdunia

ನೋಕಿಯಾ 3310 ಹೊಸ ಬದಲಾವಣೆಗಳು ಏನೇನು?

ನೋಕಿಯಾ 3310 ಹೊಸ ಬದಲಾವಣೆಗಳು ಏನೇನು?
New Delhi , ಶನಿವಾರ, 25 ಫೆಬ್ರವರಿ 2017 (06:49 IST)
ನೋಕಿಯಾ 3310 ಮತ್ತೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಗೊತ್ತೇ ಇದೆ. ಈ ಮೊಬೈಲ್ ಬಿಡುಗಡೆಯಾದಾಗ ಬಹಳಷ್ಟು ಮಂದಿ ಇದಕ್ಕೆ ಫಿದಾ ಆಗಿದ್ದರು. 2000 ದಶಕದಲ್ಲಿ ಬಂದಂತಹ  ಈ ಮೊಬೈಲ್ ಈಗ ಹಲವಾರು ವಿಶೇಷಗಳೊಂದಿಗೆ ಮಾರುಕಟ್ಟೆಗೆ ಮರುಪ್ರವೇಶ ನೀಡುತ್ತಿದೆ. ಫೆ.26ರಂದು ಬಾರ್ಸಿಲೋನಾದಲ್ಲಿ ನಡೆಯಲಿರುವ ಮೊಬೈಲ್ ಕಾಂಗ್ರೆಸ್ ಸಮಾವೇಶದಲ್ಲಿ ಇದನ್ನು ಪ್ರದರ್ಶಿಸಲಿದ್ದಾರೆ.
 
ಈ ಮೊಬೈಲ್‌ಗೆ ಸಂಬಂಧಿಸಿದ ವಿಶೇಷಗಳು ಈಗಾಗಲೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿವೆ. ಇದನ್ನು ಮತ್ತೆ ಫೀಚರ್ ಫೋನ್‌ ಆಗಿ ಬಿಡುಗಡೆ ಮಾಡುತ್ತಿದ್ದಾರೆ. ಈ ಹಿಂದಿನದಕ್ಕಿಂತ ಸ್ವಲ್ಪ ದೊಡ್ಡ ಸ್ಕ್ರೀನ್‌ನೊಂದಿಗೆ ಕಲರ್ ಡಿಸ್‍ಪ್ಲೇಯಲ್ಲಿ ನೀಡಲಿದ್ದಾರೆ. ಕೀಬೋರ್ಡ್‌ನಲ್ಲೂ ಸಣ್ಣಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. 
 
ಕೆಂಪು, ಹಳದಿ, ಹಸಿರು ಬಣ್ಣಗಳಲ್ಲಿ ಈ ಫೋನ್ ಲಭ್ಯವಾಗಲಿದೆ. ಭಾರತದ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು ರೂ.4,000 ಇರಬಹುದು ಎನ್ನಲಾಗಿದೆ. ಈಗಾಗಲೆ ನೋಕಿಯಾ 6 ಮಾಡೆಲ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಾಗಿದೆ. ಇನ್ನಷ್ಟು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ನೋಕಿಯಾ 6 ಸಹ ಜಗತ್ತಿನಾದ್ಯಂತ ಲಭ್ಯವಾಗಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

112 ಅಡಿಯ ಆದಿಯೋಗಿ ಶಿವನ ಮೂರ್ತಿ ವಿಶೇಷತೆ ಏನು..?