Select Your Language

Notifications

webdunia
webdunia
webdunia
webdunia

2000 ನೋಟು ಹಿಂಪಡೆಯಲ್ಲ, ಶೀಘ್ರದಲ್ಲಿ 200 ರೂ,ನೋಟು ಬಿಡುಗಡೆ: ಸಚಿವ ಗಂಗ್ವಾರ್

2000 ನೋಟು ಹಿಂಪಡೆಯಲ್ಲ, ಶೀಘ್ರದಲ್ಲಿ 200 ರೂ,ನೋಟು ಬಿಡುಗಡೆ: ಸಚಿವ ಗಂಗ್ವಾರ್
ನವದೆಹಲಿ , ಶುಕ್ರವಾರ, 28 ಜುಲೈ 2017 (19:13 IST)
ಕೇಂದ್ರ ಸರಕಾರ 2 ಸಾವಿರ ರೂ.ನೋಟುಗಳನ್ನು ಹಿಂಪಡೆಯಲಿದೆ ಎನ್ನುವ ವರದಿಗಳನ್ನು ತಳ್ಳಿಹಾಕಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್, ಅಂತಹ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ 200 ರೂಪಾಯಿಗಳ ನೋಟು ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
  
2 ಸಾವಿರ ರೂಪಾಯಿ ನೋಟುಗಳ ಮುದ್ರಣದಲ್ಲಿ ಕಡಿತಗೊಳಿಸಲಾಗುತ್ತಿದೆ ಎನ್ನುವ ವರದಿಗಳ ಬಗ್ಗೆ ಆರ್‌ಬಿಐ ಮಾಹಿತಿ ನೀಡಲಿದೆ. ಮಾಧ್ಯಮ ವರದಿಗಳ ಪ್ರಕಾರ ಆರ್‌ಬಿಐ 2000 ರೂ,ನೋಟುಗಳ ಮುದ್ರಣ ಸ್ಥಗಿತಗೊಳಿಸಲಾಗಿದೆ ಎನ್ನಲಾಗುತ್ತಿದೆ. 
 
ಕಳೆದ ಗುರುವಾರದಂದು ವಿಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿ 2000 ರೂಪಾಯಿ ನೋಟುಗಳ ಮೇಲೆ ನಿಷೇಧ ಹೇರಲಾಗುತ್ತಿದೆಯೇ ಎನ್ನುವ ಬಗ್ಗೆ ಲಿಖಿತ ಉತ್ತರ ನೀಡುವಂತೆ ಒತ್ತಾಯಿಸಿದಾಗ, ಸಚಿವ ಜೇಟ್ಲಿ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. 
 
ಉದ್ಯಮದ ಪರಿಣತರು ಸರಕಾರವು ಹೆಚ್ಚಿನ ಪಂಗಡವನ್ನು ರೂ. 2,000 ಟಿಪ್ಪಣಿಯು ಕಾನೂನುಬದ್ಧ ಟೆಂಡರ್ ಆಗಿ ಉಳಿಯುತ್ತದೆ, ಆದರೆ ಅದನ್ನು ದುರುಪಯೋಗಪಡಿಸುವುದಿಲ್ಲ. ಸಣ್ಣ ರೂಪಾಂತರದ ಟಿಪ್ಪಣಿಗಳ ಪ್ರಸರಣವನ್ನು ಹೊಸ ರೂ. 200 ಟಿಪ್ಪಣಿ.
 
ಉದ್ಯಮಗಳ ತಜ್ಞರ ಪ್ರಕಾರ ಕೇಂದ್ರ ಸರಕಾರ 2000 ರೂ,ನೋಟುಗಳ ಮುದ್ರಣವನ್ನು ನಿಯಂತ್ರಣಗೊಳಿಸಿ 200 ರೂಪಾಯಿ ನೋಟುಗಳ ಮುದ್ರಣವನ್ನು ಹೆಚ್ಚಳಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಕಾಂಗ್ರೆಸ್‌ನಲ್ಲಿ ಉಲ್ಬಣಿಸಿದ ಬಿಕ್ಕಟ್ಟು: 6 ಶಾಸಕರ ರಾಜೀನಾಮೆ