ಶಾಶ್ವತ ಖಾತೆತ್ ಸಂಖ್ಯೆ (ಪಾನ್) ಬೇಕಾಗಿದ್ದರೆ ಇಷ್ಟು ದಿನ ವಾರಗಟ್ಟಲೆ ಸಮಯ ಬೇಕಾಗುತ್ತಿತ್ತು. ಈಗ ಅರ್ಜಿ ಸಲ್ಲಿಸಿದ ನಿಮಿಷಗಳಲ್ಲೇ ಪಾನ್ ನಂಬರ್ ನಿಮ್ಮ ಕೈಸೇರಲಿದೆ. ಅಷ್ಟೇ ಅಲ್ಲ.. ನಿಮ್ಮ ಕೈಯಲ್ಲಿರುವ ಸ್ಮಾರ್ಟ್‍ಫೋನ್ ಮೂಲಕ ತಕ್ಷಣ ತೆರಿಗೆ ಕಟ್ಟುವ ವಿಧಾನ ಸಹ ಶೀಘ್ರದಲ್ಲೇ ಆಚರಣೆಗೆ ಬರಲಿದೆ.
ತೆರಿಗೆ ಪಾವತಿಯನ್ನು ಸುಲಭವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರತ್ಯಕ್ಷ ತೆರಿಗೆ ಮಂಡಳಿ ಆಧಾರ್ ಇ-ಕೆವೈಸಿ ಸೌಲಭ್ಯದ ಮೂಲಕ ಪಾನ್ ಜಾರಿ ಮಾಡಬೇಕೆಂದು ಯೋಚಿಸುತ್ತಿದೆ. ಬೆರಳಚ್ಚು ಆಧಾರವಾಗಿ ಕೆಲಸ ಮಾಡುವ ಬಯೋಮೆಟ್ರಿಕ್ ವಿಧಾನದಲ್ಲಿ ಇ-ಕೆವೈಸಿ ಕಾರ್ಯನಿರ್ವಹಿಸಲಿದೆ.
ಇ-ಕೆವೈಸಿ ಮೂಲಕ ಸಿಮ್ ಕಾರ್ಡ್ ನೀಡುವ ರೀತಿಯಲ್ಲೇ ಪಾನ್ ಕಾರ್ಡ್ ಸಹ ಜಾರಿ ಮಾಡಲಿದ್ದಾರೆ. ಇಷ್ಟು ದಿನ ಪಾನ್ ಕಾರ್ಡ್ ಪಡೆಯಲು ಎರಡರಿಂದ ಮೂರು ವಾರ ಹಿಡಿಸುತ್ತಿದ್ದ ಪ್ರಕ್ರಿಯೆ ಈಗ 5-6 ನಿಮಿಷಗಳಲ್ಲಿ ಪೂರ್ಣವಾಗಲಿದೆ. ಕೂಡಲೇ ಪಾನ್ ನಂಬರ್ ಕೊಡಲಾಗುತ್ತದೆ. ಕಾರ್ಡ್ ಸ್ವಲ್ಪ ದಿನಗಳಲ್ಲಿ ಕೈಸೇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.