Select Your Language

Notifications

webdunia
webdunia
webdunia
webdunia

ವಾಟ್ಸಪ್‌ನಿಂದ ಹೊಸ ಫೀಚರ್ಸ್‌ಗಳು; ಟ್ರೈ ಮಾಡಿ ನೋಡಿ

ವಾಟ್ಸಪ್‌ನಿಂದ ಹೊಸ ಫೀಚರ್ಸ್‌ಗಳು; ಟ್ರೈ ಮಾಡಿ ನೋಡಿ
ಬೆಂಗಳೂರು , ಬುಧವಾರ, 26 ಅಕ್ಟೋಬರ್ 2016 (17:12 IST)
ಬೆಂಗಳೂರು: ಫೇಸ್ಬುಕ್ ಆಡಳಿತಕ್ಕೆ ಒಳಪಟ್ಟಿರುವ ವಾಟ್ಸಪ್ ಅಪ್ಲಿಕೇಶನ್ ಇದೀಗ ಸುಭದ್ರ ಎನ್ನುವ ಮನ್ನಣೆಗೆ ಪಾತ್ರವಾಗಿದ್ದು, ದಿನದಿಂದ ದಿನಕ್ಕೆ ಅದರ ಬಳಕೆದಾರರಿಗೆ ಹೊಸ ಹೊಸ ಫೀಚರ್ಸ್‌ಗಳನ್ನು ನೀಡುತ್ತ ಇನ್ನಷ್ಟು ಜನಪ್ರಿಯವಾಗುತ್ತಿದೆ.

 
ಈ ಮೊದಲು ಚಾಟ್‌ಗೆ ಮಾತ್ರ ಸೀಮಿತವಾಗಿದ್ದ ವಾಟ್ಸಪ್, ಕರೆ ಮತ್ತು ವಿಡಿಯೋ ಕಾಲಿಂಗ್ ಗೂ ಬಂದು ಮುಟ್ಟಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಫೋಟೋಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಫೇಸ್ಬುಕ್ ನಲ್ಲಿ ಬಳಸುವಂತೆಯೇ ಕಮೆಂಟ್ ಮಾಡಬಹುದು. ಹಾಗೆಯೇ, ಗುಂಪಿನಲ್ಲಿ ಸ್ನೇಹಿತರನ್ನು ಟ್ಯಾಗ್ ಮಾಡುವುದು, ಬೇಡದ ಚಾಟ್ಗಳನ್ನು ಸ್ಟ್ರೀಕ್ ತ್ರೂ ಮಾಡುವುದನ್ನು ಮಾಡಬಹುದಾಗಿದೆ.
 
ಕೆಲ ದಿನಗಳ ಹಿಂದಷ್ಟೇ ವಾಟ್ಸಪ್ ನಲ್ಲಿ ವೀಡಿಯೊ ಕರೆಗಳು ಬರುತ್ತವೆ ಎನ್ನುವುದು ಹೆಚ್ಚು ಚರ್ಚೆಯಾಗುತ್ತಿತ್ತು. ಈಗ ಅದು ಅಧೀಕ್ಥವಾಗಿ ಹೊಸದಾಗಿ ಅಪ್ಡೇಟ್ ಮಾಡಿಕೊಂಡ ಬಳಕೆದಾರರು ಆ ಸೇವೆಯನ್ನು ಪಡೆಯಬಹುದಾಗಿದೆ. ಇದರಿಂದ ವಾಯ್ಸ್ ಕಾಲ್ ಜೊತೆಗೆ ವೀಡಿಯೊ ಕರೆಗಳನ್ನು ಸಹ ಪಡೆಯಬಹುದಾಗಿದೆ. ಫೋಟೋ ಎಡಿಟಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರು ಸ್ನ್ಯಾಪ್ ಶಾಟ್ ಗಳಂತೆಯೇ ಫೋಟೋಗಳನ್ನು ಎಡಿಟ್ ಮಾಡಿಕೊಳ್ಳಬಹುದು. ಜೊತೆಗೆ, ಅದಕ್ಕೆ ಇಮೋಜಿ ಸೇರ್ಪಡೆ, ಟೆಕ್ಸ್ಟ್ ಐಕಾನ್ ಮತ್ತು ಪೇಂಟ್ ಬ್ರಶ್ ಗಳನ್ನು ಬಳಕೆ ಮಾಡಿ ಫೋಟೋಗಳನ್ನು ಇನ್ನಷ್ಟು ಅಂದವನ್ನಾಗಿ ಮಾಡಿಕೊಳ್ಳಬಹುದು.
 
ವಾಟ್ಸಪ್ ಅಂದ ಮೇಲೆ ಸಂವಾದ, ಗ್ರೂಪ್ ಸಾಮಾನ್ಯ. ಹಾಗಂತ ಅದರಲ್ಲಿ ಯಾರ್ಯಾರು ಏನೇನು ಹೇಳಿದ್ದಾರೆ ಎಂದು ಒಮ್ಮೆಲೆ ತಿಳಿಯದು. ಹಾಗೆ ಅವರಿಗೆ ಪ್ರತಿಕ್ರಿಯೆ ನೀಡಬೇಕೆಂದರೆ ಮತ್ತಷ್ಟು ಸಂದೇಶಗಳು ಪಟಪಟನೇ ಬಂದು ಸೇರಿಕೊಳ್ಳುತ್ತವೆ. ಈ ಸಂದರ್ಭದಲ್ಲಿ  ಹಿಂದಿನ ಸಂದೇಶವನ್ನು ಖೋಟ್ ಮಾಡಲು, ಸಂದೇಶದ ಮೇಲೆ ದೀರ್ಘವಾಗಿ ಒತ್ತಿದಾಗ ರಿಪ್ಲೈ ಕಾಣಿಸಿಕೊಳ್ಳುತ್ತದೆ. ಈ ಐಕಾನ್ ಮೇಲೆ ಕ್ಲಿಕ್ಕಿಸಿ, ನಿಮ್ಮ ಉತ್ತರವನ್ನು ಟೈಪ್ ಮಾಡಿ ಕಳುಹಿಸಬಹುದು. ಸಂದೇಶಗಳನ್ನು ಬೋಲ್ಡ್ ಮಾಡಲು(ಶಬ್ದದ ಆರಂಭ ಮತ್ತು ಕೊನೆಗೆ (*) ಬಳಸಬೇಕು. ಇಟಾಲಿಕ್ ಮಾಡಲು (_) ಬಳಸಿದರೆ, ಬೇಡದ ಚಾಟ್ಗಳನ್ನು ಸ್ಟ್ರೀಕ್ ತ್ರೂ ಮಾಡಲು() ಬಳಸಬಹುದಾಗಿದೆ. ಹಾಗಾದರೆ ಇವನ್ನೆಲ್ಲ ಪರೀಕ್ಷಿಸಲು ನೀವೊಮ್ಮೆ ಪ್ರಯತ್ನಿಸಿ. ಹೊಸ ಅನುಭವ ಪಡೆಯಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪ ದೋಷಮುಕ್ತರಾಗಿರಬಹುದು, ಆದ್ರೆ, ಭ್ರಷ್ಟಾಚಾರ ನಡೆದಿಲ್ಲವೇ?: ಸಿಎಂ