Select Your Language

Notifications

webdunia
webdunia
webdunia
webdunia

ಮಾರುಕಟ್ಟೆಗೆ ಬಂತು ಹೊಸ ಎತಿಯೋಸ್ ಲಿವಾ

ಮಾರುಕಟ್ಟೆಗೆ ಬಂತು ಹೊಸ ಎತಿಯೋಸ್ ಲಿವಾ
New Delhi , ಗುರುವಾರ, 9 ಫೆಬ್ರವರಿ 2017 (11:02 IST)
ಟೊಯೊಟಾ ಎತಿಯೋಸ್ ಲಿವಾ ಹೊಸ ವಾಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮುಂಬೈನಲ್ಲಿ ಇದರ ಎಕ್ಸ್‌ಶೋರೂಂ ಬೆಲೆ ರೂ.5.94 ಲಕ್ಶಗಳು. ಇದರಲ್ಲಿನ ಟಾಪ್ ಎಂಡ್ ಡೀಸೆ ಕಾರಿನ ಬೆಲೆ ರೂ.7.61 ಲಕ್ಷಗಳು. ಡ್ಯುಯಲ್ ಟೋನ್ ಬಣ್ಣಗಳಲ್ಲಿ ಈ ಕಾರು ಲಭ್ಯವಾಗುತ್ತಿದೆ.
 
ಒಳ ಭಾಗದಲ್ಲೂ ಎರಡು ಬಣ್ಣಗಳನ್ನು ಬಳಸಿರುವುದು ಈ ಕಾರಿನ ವಿಶೇಷ. ಗ್ರಾಹಕರ ಬೇಡಿಕೆ ಮೇರೆಗೆ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಸ್ಫೋರ್ಟ್ಸ್ ಲುಕ್‌ಗಾಗಿ ಸ್ಪಾಯ್ಲರ್ ಬಳಸಿದ್ದಾರೆ. ಮುಂಬದಿ ಗ್ರಿಲ್, ಫಾಗ್ ಲ್ಯಾಂಪ್, ಎಲೆಕ್ಟ್ರಿಲ್ ಆಗಿ ಮಡಚಿಕೊಳ್ಳುವ ಓಆರ್‌ವಿಎಂ (ಮಿರರ್), ಡೈಮಂಡ್ ಕಟ್ ಅಲಾಯ್ ವ್ಹೀಲ್ ಸಹ ಇದೆ.
 
ಹೆಚ್ಚಿನ ಸುರಕ್ಷತೆಗಾಗಿ ಎರಡು ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದೆ. ಇವುಗಳೊಂದಿಗೆ ಕೆಲವೊಂದು ವಿಶೇಷ ಸೌಲಭ್ಯಗಳು ಈ ಕಾರಿನಲ್ಲಿ ಇವೆ. ಒಳ್ಳೆಯ ಸ್ಫೋರ್ಟ್ಸ್ ಬಯಸುವರಿಗೆ, ಬಜೆಟ್ ಕಾರುಗಳಲ್ಲಿ ಎತಿಯೋಸ್ ಲಿವಾ ಗಮನಸೆಳೆಯುತ್ತದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಎಸ್ ಎಂ ಕೃಷ್ಣ ಹಿಂದೆಯೇ ರೆಬಲ್ ಸ್ಟಾರ್ ಅಂಬರೀಶ್ ಬಿಜೆಪಿಗೆ?