Webdunia - Bharat's app for daily news and videos

Install App

ಭಾವೀ ಸೊಸೆಗೆ ಭಾರೀ ಉಡುಗೊರೆ ಕೊಟ್ಟ ಮುಕೇಶ್ ಅಂಬಾನಿ

Krishnaveni K
ಗುರುವಾರ, 22 ಫೆಬ್ರವರಿ 2024 (16:45 IST)
ಮುಂಬೈ: ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ ಕುಟುಂದಲ್ಲಿ ಈಗ ಮದುವೆ ಸಂಭ್ರಮ ಮನೆ ಮಾಡಿದೆ. ಮುಕೇಶ್ ಪುತ್ರ ಅನಂತ್ ಅಂಬಾನಿ ಸದ್ಯದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಅನಂತ್ ಹಾಗೂ ಅವರ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭಕ್ಕೆ ಈಗಲೇ ಸಿದ್ಧತೆ ಶುರುವಾಗಿದೆ. ಇದೀಗ ಮುಕೇಶ್ ಅಂಬಾನಿ ದಂಪತಿ ಸೊಸೆ ರಾಧಿಕಾ ಮರ್ಚೆಂಟ್ ಗೆ ನೀಡಿದ ದುಬಾರಿ ಉಡುಗೊರೆ ಭಾರೀ ಸುದ್ದಿ ಮಾಡುತ್ತಿದೆ. ಹೇಳಿ, ಕೇಳಿ ಸಾವಿರಾರು ಕೋಟಿಗಳ ಒಡೆಯ. ಹೀಗಿರುವಾಗ ಅವರ ವರ್ಚಸ್ಸಿಗೆ ತಕ್ಕಂತೇ ಉಡುಗೊರೆ ನೀಡಬೇಕಲ್ಲವೇ?

ಅಂಬಾನಿ ದಂಪತಿ ತಮ್ಮ ಮುದ್ದಿನ ಸೊಸೆ ರಾಧಿಕಾಗೆ ಬೆಳ್ಳಿಯ ಲಕ್ಷ್ಮಿ-ಗಣಪತಿಯ ವಿಗ್ರಹವಿರುವ ಉಡುಗೊರೆ ನೀಡಿದೆ. ಇದರಲ್ಲಿ ಬೆಳ್ಳಿಯ ತುಳಸಿ ಪಾತ್ರೆಗಳೂ ಇವೆ. ಇದಕ್ಕೆ ಮೊದಲು ಕಳೆದ ವರ್ಷ ನಿಶ್ಚಿತಾರ್ಥದ ಸಂದರ್ಭದಲ್ಲಿ ರಾಧಿಕಾಗೆ ಮುಕೇಶ್ ದಂಪತಿ ದುಬಾರಿ ಬೆಲೆಯ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಕಾರಿನ ಬೆಲೆ ಬರೋಬ್ಬರಿ 4.5 ಕೋಟಿ ರೂ.ಗಳಾಗಿತ್ತು. ಇದು ಭಾರತದಲ್ಲಿ ಕೆಲವೇ ಕೆಲವು ಸೆಲೆಬ್ರಿಟಿಗಳ ಬಳಿ ಮಾತ್ರವಿದೆ.

ಇದಕ್ಕೆ ಮೊದಲು ಮುಕೇಶ್ ದಂಪತಿ ತಮ್ಮ ಮೊದಲ ಸೊಸೆ ಶ್ಲೋಕಾ ಮೆಹ್ತಾಗೂ ದುಬಾರಿ ಉಡುಗೊರೆ ನೀಡಿದ್ದರು. ಶ್ವೇತಾಗೆ 450 ಕೋಟಿ ರೂ. ಬೆಲೆಯ ವಜ್ರದ ನೆಕ್ಲೇಸ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಮದುವೆ ವೇಳೆ ರಾಧಿಕಾಗೆ ಮಾವ-ಅತ್ತೆ ಕಡೆಯಿಂದ ಮತ್ತಷ್ಟು ಉಡುಗೊರೆಗಳು ಸಿಗುವುದು ಗ್ಯಾರಂಟಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಲ್ವಡಿ ಕೃಷ್ಣರಾಜ ಒಡೆಯರ್ ನಾಡಿಗೆ ನೀಡಿದ ಕೊಡುಗೆಗಳ ಪಟ್ಟಿ ಇಲ್ಲಿದೆ ನೋಡಿ

ನಾಲ್ವಡಿ ಒಡೆಯರ್ ಗಿಂತ ನೀವು ಗ್ರೇಟ್ ಅಂತೆ ಎಂದು ಕೇಳಿದ್ದಕ್ಕೆ ಸಿದ್ದರಾಮಯ್ಯ ಉತ್ತರ ನೋಡಿ

ಸಿದ್ದರಾಮಯ್ಯ ಒಡೆಯರ್ ಗಿಂತ ಗ್ರೇಟ್ ಎಂದಿದ್ದ ಯತೀಂದ್ರ: ಯದುವೀರ್ ಒಡೆಯರ್ ಉತ್ತರ ನೋಡಿ

ರಸಗೊಬ್ಬರ ರೈತರಿಗೆ ಸಿಗಲು ಸರ್ಕಾರ ವ್ಯವಸ್ಥೆಯೇ ಮಾಡಿಲ್ಲ: ಬಿವೈ ವಿಜಯೇಂದ್ರ

Arecanut price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments