Webdunia - Bharat's app for daily news and videos

Install App

ಗ್ರಾಹಕರ ಅಚ್ಚುಮೆಚ್ಚಿನ ಮೊಟೋರೋಲಾ ಮೋಟೋ ಜಿ4 ಇಂದು ಮಾರುಕಟ್ಟೆಗೆ

Webdunia
ಬುಧವಾರ, 22 ಜೂನ್ 2016 (15:37 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೊಟೋರೋಲಾ, ಇಂದು ಭಾರತದ ಮಾರುಕಟ್ಟೆಗೆ ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. 
 
ಮೊಟೋರೋಲಾ ಸಂಸ್ಥೆ ಟ್ವಿಟರ್ ಮೂಲಕ ಮೋಟೋ ಜಿ4 ಪೋನ್‌ ಬಿಡುಗಡೆ ಪ್ರಚಾರವನ್ನು ಕೈಗೊಂಡಿದೆ. 
 
ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ನಡೆದ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಮತ್ತು ಮೋಟೋ ಜಿ-4 ಬಜೆಟ್ ಪೋನ್‌ಗಳನ್ನು ಅನಾವರಣಗೊಳಿಸಿತ್ತು. ಇದೇ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಆವೃತ್ತಿಯ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೋಟೋ ಜಿ-4 ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಾಗುತ್ತಿವೆ. ಕೆಲವು ವೈಶಿಷ್ಟ್ಯಗಳನ್ನು ಹೊರತುಪಡಿಸಿ ಮೋಟೋ ಜಿ-4 ಮತ್ತು ಮೋಟೋ ಜಿ-4 ಪ್ಲಸ್ ಸ್ಮಾರ್ಟ್‌ಪೋನ್‌ಗಳಲ್ಲಿ ಸಾಮ್ಯತೆ ಇದೆ.
 
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ವೈಶಿಷ್ಟ್ಯಗಳು
 
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗೊರಿಲ್ಲಾ ಗ್ಲಾಸ್ 3 ಮತ್ತು 401ಪಿಪಿಐ ಸ್ಪೋರ್ಟ್ಸ್ ಪಿಕ್ಸೆಲ್ ಡೆನ್ಸಿಟಿ ಒಳಗೊಂಡಂತೆ 5.5 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 1.5ಜಿಎಚ್‌ಝಡ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 617 ಪ್ರೊಸೆಸರ್, ಆಯಡ್ರಿನೋ 405 ಜಿಪಿಯು ಚಾಲಿತ 3000ಎಮ್‌ಎಎಚ್ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
 
ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಹೊಂದಿರುವ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಆಟೋಫೋಕಸ್ ಟೆಕ್ ವೈಶಿಷ್ಟ್ಯ ಹೊಂದಿದೆ.
 
ಮೋಟೋ ಜಿ-4 ಸ್ಮಾರ್ಟ್‌ಪೋನ್‌ಗಳು 2 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 6.0.1 ಆಂಡ್ರಾಯ್ಡ್ ಮಾರ್ಷ್ಮ್ಯಾಲೋ ವೈಶಿಷ್ಟ್ಯದ ಜೊತೆಗೆ ವಿಒಎಲ್‌ಟಿಇ ಸಂಪರ್ಕ ಹೊಂದಿದೆ.
 
ಈ ಆವೃತ್ತಿಯ ಪೋನ್‌ಗಳು ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿದ್ದು, 4-ಜಿ ಮತ್ತು 3-ಜಿ ಸೌಲಭ್ಯ ಸೇರಿದಂತೆ ಆಟೋ ಎಚ್‌ಡಿಆರ್, ಪನೊರಾಮಾ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್

ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ

ಮಲೆ ಮಹದೇಶ್ವರ ಬೆಟ್ಟ: ಐದು ಹುಲಿಗಳ ಸಾವಿನ ಹಿಂದಿದೆ ಧ್ವೇಷದ ಕತೆ

ವಿಮಾನ ದುರಂತ: ತೀವ್ರವಾಗಿ ಮುಂದುವರೆದ ತನಿಖೆ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

ಮುಂದಿನ ಸುದ್ದಿ
Show comments