ಸ್ಮಾರ್ಟ್ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೊಟೋರೋಲಾ, ಇಂದು ಭಾರತದ ಮಾರುಕಟ್ಟೆಗೆ ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳನ್ನು ಬಿಡುಗಡೆ ಮಾಡಿದೆ.
ಮೊಟೋರೋಲಾ ಸಂಸ್ಥೆ ಟ್ವಿಟರ್ ಮೂಲಕ ಮೋಟೋ ಜಿ4 ಪೋನ್ ಬಿಡುಗಡೆ ಪ್ರಚಾರವನ್ನು ಕೈಗೊಂಡಿದೆ.
ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ನಡೆದ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಮತ್ತು ಮೋಟೋ ಜಿ-4 ಬಜೆಟ್ ಪೋನ್ಗಳನ್ನು ಅನಾವರಣಗೊಳಿಸಿತ್ತು. ಇದೇ ಸಮಾರಂಭದಲ್ಲಿ ಮೊಟೋರೋಲಾ ಸಂಸ್ಥೆ ಮೋಟೋ ಜಿ-4 ಪ್ಲಸ್ ಆವೃತ್ತಿಯ ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೋಟೋ ಜಿ-4 ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ.
ಈ ಆವೃತ್ತಿಯ ಸ್ಮಾರ್ಟ್ಪೋನ್ಗಳು ಅಮೆಜಾನ್ ಆನ್ಲೈನ್ ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಲಭ್ಯವಾಗುತ್ತಿವೆ. ಕೆಲವು ವೈಶಿಷ್ಟ್ಯಗಳನ್ನು ಹೊರತುಪಡಿಸಿ ಮೋಟೋ ಜಿ-4 ಮತ್ತು ಮೋಟೋ ಜಿ-4 ಪ್ಲಸ್ ಸ್ಮಾರ್ಟ್ಪೋನ್ಗಳಲ್ಲಿ ಸಾಮ್ಯತೆ ಇದೆ.
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳ ವೈಶಿಷ್ಟ್ಯಗಳು
ಮೋಟೋ ಜಿ-4 ಆವೃತ್ತಿಯ ಸ್ಮಾರ್ಟ್ಪೋನ್ಗಳು ಗೊರಿಲ್ಲಾ ಗ್ಲಾಸ್ 3 ಮತ್ತು 401ಪಿಪಿಐ ಸ್ಪೋರ್ಟ್ಸ್ ಪಿಕ್ಸೆಲ್ ಡೆನ್ಸಿಟಿ ಒಳಗೊಂಡಂತೆ 5.5 ಇಂಚ್ ಫುಲ್ ಎಚ್ಡಿ ಡಿಸ್ಪ್ಲೇ ಹೊಂದಿದ್ದು, 1.5ಜಿಎಚ್ಝಡ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 617 ಪ್ರೊಸೆಸರ್, ಆಯಡ್ರಿನೋ 405 ಜಿಪಿಯು ಚಾಲಿತ 3000ಎಮ್ಎಎಚ್ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ಈ ಹೊಸ ಆವೃತ್ತಿಯ ಸ್ಮಾರ್ಟ್ಪೋನ್ಗಳು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಫ್ಲ್ಯಾಶ್ ಹೊಂದಿರುವ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, ಫಿಂಗರ್ ಪ್ರಿಂಟ್ ಸೆನ್ಸಾರ್ ಮತ್ತು ಆಟೋಫೋಕಸ್ ಟೆಕ್ ವೈಶಿಷ್ಟ್ಯ ಹೊಂದಿದೆ.
ಮೋಟೋ ಜಿ-4 ಸ್ಮಾರ್ಟ್ಪೋನ್ಗಳು 2 ಜಿಬಿ ರ್ಯಾಮ್ ಜೊತೆಗೆ 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 6.0.1 ಆಂಡ್ರಾಯ್ಡ್ ಮಾರ್ಷ್ಮ್ಯಾಲೋ ವೈಶಿಷ್ಟ್ಯದ ಜೊತೆಗೆ ವಿಒಎಲ್ಟಿಇ ಸಂಪರ್ಕ ಹೊಂದಿದೆ.
ಈ ಆವೃತ್ತಿಯ ಪೋನ್ಗಳು ಡ್ಯುಯಲ್ ಸಿಮ್ ಸೌಲಭ್ಯವನ್ನು ಹೊಂದಿದ್ದು, 4-ಜಿ ಮತ್ತು 3-ಜಿ ಸೌಲಭ್ಯ ಸೇರಿದಂತೆ ಆಟೋ ಎಚ್ಡಿಆರ್, ಪನೊರಾಮಾ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.