Select Your Language

Notifications

webdunia
webdunia
webdunia
webdunia

ರು.12 ಲಕ್ಷಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಮನೆ ಕೊಳ್ಳಬಹುದು

ರು.12 ಲಕ್ಷಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಮನೆ ಕೊಳ್ಳಬಹುದು
Bangalore , ಬುಧವಾರ, 4 ಜನವರಿ 2017 (11:34 IST)
ಕಳೆದ ಒಂದೂವರೆ ದಶಕದಿಂದ ರಿಯಲ್ ಎಸ್ಟೇಟ್ ಉದ್ಯಮದ ದರಗಳು ಗಗನಮುಖಿಯಾಗಿದ್ದರಿಂದ ನಗರ ಪ್ರದೇಶಗಳ ಬಡಜನರು ಸ್ವಂತ ಮನೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಹೊಸವರ್ಷ ಅಂತಹ ಬಡಜನರ ಬಹುದಿನದ ಕನಸನ್ನು ನನಸು ಮಾಡುವ ನಿರೀಕ್ಷೆಯನ್ನು ಹುಟ್ಟಿಸಿದೆ. 
 
ವಿಧಾನಸೌಧದಿಂದ ಕೇವಲ 30 ಕಿಲೋಮೀಟರ್ ಸುತ್ತಳತೆಯ ದೂರದಲ್ಲಿ ಇದೀಗ ಈ ಬಡಜನರು ಕೇವಲ 12 ಲಕ್ಷ ರೂಪಾಯಿಗೆ ಒಂದು ಸುಸಜ್ಜಿತ ಮನೆಯನ್ನು ಖರೀದಿ ಮಾಡಬಹುದಾಗಿದೆ. ಹೊಸ ವರ್ಷದ ಶುಭಾಶಯಗಳನ್ನು ಹೇಳಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಡಿಮೆ ದರದ ಮನೆಯ ಭರವಸೆಯನ್ನು ನೀಡಿದ್ದಾರೆ. 
 
ಪ್ರಧಾನಮಂತ್ರಿ ಅವಾಸ್ ಯೋಜನೆ(ಪಿಎಂಎವೈ)ಯಡಿ (ಈ ಹಿಂದೆ ಯೋಜನೆಗೆ ಸುಲಭ ದರದ ವಸತಿ ಯೋಜನೆ ಎಂದು ಕರೆಯಲಾಗುತ್ತಿತ್ತು) ಗೃಹಸಾಲದ ಬಡ್ಡಿಯನ್ನು 12 ಲಕ್ಷ ರೂಪಾಯಿ ಮತ್ತು 9 ಲಕ್ಷ ರೂಪಾಯಿಗೆ ಕ್ರಮವಾಗಿ ಶೇ. 3 ಮತ್ತು ಶೇ.4 ರಷ್ಟು ವಿನಾಯ್ತಿನ್ನು ಘೋಷಿಸಲಾಗಿದೆ. 
 
ಈ ಮೂಲಕ ಪ್ರಧಾನಮಂತ್ರಿಗಳು ಮನೆಯನ್ನು ಖರೀದಿಸುವವರ ಮಾಸಿಕ ಕಂತಿನ ಪಾವತಿ ಹಣವನ್ನು ಮನೆಗೆ ಬಾಡಿಗೆ ಕೊಡುವ ಹಣಕ್ಕಿಂತ ಕಡಿಮೆ ಮಾಡಿದ್ದಾರೆ. ಪ್ರಸ್ತುತ ಗೃಹ ಸಾಲದ ಮೇಲಿನ ಬಡ್ಡಿಯ ಪ್ರಮಾಣ ಶೇ.9.5 ರಿಂದ 10.5 ರಷ್ಟಿದೆ. ಈ ಬಡ್ಡಿ ಆಧಾರದಲ್ಲಿ ಸಾಲ ತೆಗೆದುಕೊಂಡವರು ಪ್ರತಿ ತಿಂಗಳು 6000-6700 ರೂಪಾಯಿಯ ಕಂತನ್ನು ಪಾವತಿ ಮಾಡಬೇಕಿತ್ತು. 
 
ಆದರೆ, ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಬಡ್ಡಿಯಲ್ಲಿ ರಿಯಾಯ್ತಿ ನೀಡಿರುವುದರಿಂದ ಇನ್ನು ಮುಂದೆ ಮಾಸಿಕವಾಗಿ ಕೇವಲ 3000- 4000 ರೂಪಾಯಿಯ ಕಂತನ್ನು 15 ವರ್ಷಗಳ ಕಟ್ಟಬೇಕು. ಈ ಮೂಲಕ ಸ್ವಂತ ಮನೆ ಹೊಂದಬೇಕೆಂಬ ಬಹುದಿನಗಳ ಕನಸನ್ನು ನನಸು ಮಾಡುವ ವಿಧಾನವನ್ನು ಮತ್ತಷ್ಟು ಸರಳ ಮಾಡಿದಂತಾಗಿದೆ.
 
ಈ ಬಗ್ಗೆ ಅವಲೋಕನ ಮಾಡಿರುವ ಬ್ರಿಗೇಡ್ ಗ್ರೂಪ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ರೆಸಿಡೆನ್ಷಿಯಲ್) ಓಂ ಅಹುಜಾ ಅವರು, ``ಮೋದಿ ಅವರ ಕ್ರಮದಿಂದಾಗಿ ಬೆಂಗಳೂರು ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಕೆಲವು ರಿಯಲ್ ಎಸ್ಟೇಟ್ ಕಂಪನಿಗಳು ನಂಬಿವೆ. ನಗರ ವಸತಿ ಯೋಜನೆಯಿಂದ ಕೈಗೆಟುಕುವ ದರದ ವಸತಿ ಕ್ಷೇತ್ರಕ್ಕೆ ದೇಶಾದ್ಯಂತ ಸಾಕಷ್ಟು ಲಾಭವಾಗಲಿದೆ. ಈ ಯೋಜನೆಯನ್ನು ಬೆಂಗಳೂರು ಹೊರವಲಯ ಮತ್ತು ಬೆಂಗಳೂರಿಗೆ ಹೊಂದಿಕೊಂಡಂತಿರುವ ಗ್ರಾಮಾಂತರ ಪ್ರದೇಶಗಳಿಗೆ ಸೀಮಿತಗೊಳಿಸಿರುವುದರಿಂದ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವವರಿಗೆ ಆಗುವ ಲಾಭ ಕಡಿಮೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ.
 
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಅಭ್ಯರ್ಥಿಗಳು ತಾವು ಸಾಲ ಪಡೆಯುವ ಸಂಸ್ಥೆಯಲ್ಲಿ ಬಡ್ಡಿಯ ರಿಯಾಯ್ತಿಯನ್ನು ಪಡೆಯಲಿದ್ದಾರೆ. ಈ ರಿಯಾಯ್ತಿ ನೀಡಿದ ಬಡ್ಡಿಯನ್ನು ಬ್ಯಾಂಕ್ ಅಥವಾ ಇನ್ನಿತರೆ ಹಣಕಾಸು ಸಂಸ್ಥೆಗಳೂ ಗೃಹ ಹಣಕಾಸು ನಿಯಮದಂತೆ ಸರ್ಕಾರದಿಂದ ವಾಪಸ್ ಪಡೆಯಲಿವೆ. ಈ ನಿಟ್ಟಿನಲ್ಲಿ ದೇಶದ 100 ಕ್ಕೂ ಹೆಚ್ಚು ಗೃಹ ಹಣಕಾಸು ಸಂಸ್ಥೆಗಳು ರಾಷ್ಟ್ರೀಯ ವಸತಿ ಬ್ಯಾಂಕ್(ಎನ್‍ಎಚ್‍ಬಿ) ಜತೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿವೆ.
 
ರಾಜ್ಯ ವಸತಿ ನಿಗಮದ ಅಧಿಕಾರಿಯೊಬ್ಬರ ಪ್ರಕಾರ, ಬೆಂಗಳೂರಿನಿಂದ 35 ರಿಂದ 40 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಅತ್ತಿಬೆಲೆ, ರಾಜಾನುಕುಂಟೆ ಮತ್ತು ಹೊಸಕೋಟೆ ಪ್ರದೇಶಗಳು ಈ ಸುಲಭ ದರದ ಮನೆ ಯೋಜನೆಗಳಿಗೆ ಹೇಳಿ ಮಾಡಿಸಿದಂತಹ ಸ್ಥಳಗಳಾಗಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ- ಮಗನ ದಿಢೀರ್ ಭೇಟಿಯೂ ವಿಫಲ?