Publish Date: Fri, 19 Apr 2019 (06:08 IST)
Updated Date: Fri, 19 Apr 2019 (06:10 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಸೆಲ್ಫೀ ಹುಚ್ಚು ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕ್ಯಾಮರಾ ನೀವು ಕಿಸ್ ಮಾಡಿದರೆ ತಾನಾಗಿಯೇ ಸೆಲ್ಫೀ ಕ್ಲಿಕ್ಕಿಸುತ್ತದೆ!
ಗೂಗಲ್ ಇಂತಹದ್ದೊಂದು ಕ್ಯಾಮರಾ ಆಪ್ ಕಂಡುಹಿಡಿದಿದ್ದು, ಇದರಲ್ಲಿರುವ ವಿಶೇಷ ವ್ಯವಸ್ಥೆ ಕಿಸ್ ಮಾಡುವಾಗ ತಾನಾಗಿಯೇ ಸೆಲ್ಫೀ ಕ್ಲಿಕ್ಕಿಸುತ್ತೆ!
ಕ್ಯಾಮರಾ ಆಪ್ ನಲ್ಲಿ ಫೋಟೋ ಬೂತ್ ಫೀಚರ್ ಅಳವಡಿಸಲಾಗುತ್ತಿದ್ದು, ಇದು ಒಬ್ಬ ವ್ಯಕ್ತಿ ಫೋಟೋಗೆ ರೆಡಿ ಎನಿಸಿದಾಗ ಫೋಟೋ ತೆಗೆಯುತ್ತೆ. ಹಾಗೆಯೇ ಇದರಲ್ಲಿ ಕಿಸ್ ಡಿಟೆಕ್ಷನ್ ಮಾಡೆಲ್ ಇದ್ದು, ಇದು ಕಿಸ್ ಮಾಡುವಾಗ ಸೆಲ್ಫೀ ಕ್ಲಿಕ್ಕಿಸುತ್ತೆ. ಇದಕ್ಕಾಗಿ ಪಿಕ್ಸೆಲ್ 3 ಕ್ಯಾಮರಾ ಮೊಬೈಲ್ ಗೆ ಫಿಕ್ಸ್ ಮಾಡಲಾಗಿದೆ.
ಈ ಕಿಸ್ ಸೆಲ್ಫೀ ಹೇಗೆ ಬರುತ್ತದೆ ಎಂದು ನೋಡಬೇಕಾದರೆ ಗೂಗಲ್ ಕ್ಯಾಮರಾ 6.2 ಎಪಿಕೆ ಫೈಲ್ ಫೋನ್ ಗೆ ಅಳವಡಿಸಿಕೊಳ್ಳಿ. ಮತ್ತು ಇದರಲ್ಲಿ ಫೋಟೋ ಬೂತ್ ತೆರೆದು ಕಿಸ್ ಮಾಡಿ ನೋಡಿ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ