ಉಬರ್ ಜೊತೆಗೆ ದೇಶೀಯ ಮೊಬೈಲ್ ತಯಾರಿಕಾ ಸಂಸ್ಥೆ ಮೈಕ್ರೋಮ್ಯಾಕ್ಸ್ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಇನ್ನು ಮುಂದೆ ಮೈಕ್ರೋಮ್ಯಾಕ್ಸ್ ಮೊಬೈಲ್ ಫೋನ್‌ಗಳಲ್ಲಿ ಉಬರ್ ಆಪ್ ಇನ್ಬಿಲ್ಟ್ ಆಗಿ ಬರಲಿದೆ. ಇದರಿಂದ ಇನ್ನಷ್ಟು ಜನಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಊಬರ್ ತಿಳಿಸಿದೆ.
ಮೂರು ವರ್ಷಗಳ ಕಾಲಾವಧಿಯ ಈ ಒಡಂಬಡಿಕೆಯಿಂದ 100 ದಶಲಕ್ಷ ಮೈಕ್ರೋಮ್ಯಾಕ್ಕ್ಸ್ ಸ್ಮಾರ್ಟ್‍ಫೋನ್‌ಗಳಲ್ಲು ಉಬರ್ ಆಪ್ ಇನ್ಬಿಲ್ಟ್ ಆಗಿ ಬರಲಿದೆ. ಈ ಆಪ್ ಜೊತೆಗೆ ಫುಡ್, ಟ್ರಾವಲ್, ಶಾಪಿಂಗ್, ಕ್ರಿಕೆಟ್, ನ್ಯೂಸ್ ಆಪ್‌ಗಳು ಸಹ ಇರಲಿವೆ.
"ಈ ಒಪ್ಪಂದದಿಂದ ಮೈಕ್ರೋಮ್ಯಾಕ್ಸ್ ಮೂಲಕ ಉಬರ್ ಗಣನೀಯವಾಗಿ ಬೆಳವಣಿಗೆಯಾಗಲಿದೆ. ಅಷ್ಟೇ ಅಲ್ಲದೆ ನಮ್ಮ ಬಳಕೆದಾರರಿಗೂ ಉಪಯುಕ್ತವಾಗಲಿದೆ. ಉತ್ತಮವಾದ ಅನುಭವವನ್ನು ಗ್ರಾಹಕರು ಪಡೆಯಬಹುದು " ಎಂದು ಮೈಕ್ರೋಮ್ಯಾಕ್ಸ್ ಸಹ ವ್ಯವಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.