Select Your Language

Notifications

webdunia
webdunia
webdunia
webdunia

ಮೈಕ್ರೋಮ್ಯಾಕ್ಸ್ ಮಾರಾಟದಲ್ಲಿ ಇಳಿಮುಖ

ಮೈಕ್ರೋಮ್ಯಾಕ್ಸ್ ಮಾರಾಟದಲ್ಲಿ ಇಳಿಮುಖ
New Delhi , ಗುರುವಾರ, 8 ಡಿಸೆಂಬರ್ 2016 (10:29 IST)
ರೂ.500 ಮತ್ತು 1000 ಮುಖಬೆಲೆ ನೋಟು ನಿಷೇಧಿಸಿದ ಪರಿಣಾಮ ದೇಶೀಯ ಮೊಬೈಲ್ ತಯಾರಿಕಾ ಕಂಪನಿ ಮೈಕ್ರೋಮ್ಯಾಕ್ಸ್ ಮಾರಾಟದಲ್ಲಿ ಇಳಿಮುಖವಾಗಿದೆ. ನೋಟಿ ರದ್ದಾದ ಮೇಲೆ ನಮ್ಮ ಮಾರಾಟದಲ್ಲಿ ಶೇ.25ರಿಂದ 30ರಷ್ಟು ಕಡಿಮೆ ಆಗಿದೆ ಎಂದು ಹೇಳಿದೆ.
 
ಆಲ್‌ಲೈನ್ ಮಾರಾಟದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಿವೆ ಎಂದಿರುವ ಕಂಪನಿ, ಅಂಗಡಿಗಳ ಮೂಲಕ ಶೇ.15-18ರಷ್ಟು ಕಡಿಮೆ ಆಗಿದೆ ಎಂದು ಪ್ರಕಟಿಸಿದೆ. "ಮೊಬೈಲ್ ಮಾರಾಟ ಶೇ. 25-30ರಷ್ಟು ಇಳಿಮುಖವಾಗಿದೆ. ಮುಖ್ಯವಾಗಿ ಕ್ಯಾಶ್ ಆನ್ ಡೆಲಿವರಿಯಿಂದ ಬರುವ ಆದಾಯಕ್ಕೆ ಹೊಡೆತ ಬಿದ್ದಿದೆ. ಕಳೆದ ನಾಲ್ಕು ವಾರಗಳಿಂದ ಅಂಗಡಿಗಳಲ್ಲೂ ಇದೇ ಪರಿಸ್ಥಿತಿ. ಕೆಲವು ಕಡೆ ಶೇ.60ರಷ್ಟು ಇಳಿಮುಖವಾಗಿದೆ" ಎಂದು ಮೈಕ್ರೋಮ್ಯಾಕ್ಸ್‌ನ ಮುಖ್ಯ  ಮಾರುಕಟ್ಟೆ ಅಧಿಕಾರಿ ಶುಭಜಿತ್ ಹೇಳಿದ್ದಾರೆ.
 
ಆದರೆ ಪರಿಸ್ಥಿತಿ ಈಗೀಗ ಚೇತರಿಸಿಕೊಳ್ಳುತ್ತಿದೆ. "ಒಟ್ಟಾರೆ ಮಾರಾಟ ನಿಂತುಹೋಗಿಲ್ಲ. ಆದರೆ ಕೆಲವೊಂದು ಸಮಸ್ಯೆಗಳು ಮಾತ್ರ ಎದುರಾದವು" ಎಂದು ವಿವರಿಸಿದರು. ಹೊಸ ವರ್ಷದಲ್ಲಿ ಈ ಪರಿಸ್ಥಿತಿ ಸರಿಹೋಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಮಾರ್ಟ್‌ಫೋನ್ ಬ್ಯಾಟರಿ ಬಗ್ಗೆ ಆಪಲ್ ಶಾಕಿಂಗ್ ನ್ಯೂಸ್