Webdunia - Bharat's app for daily news and videos

Install App

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಲ್ಯಾಪ್‌ಬುಕ್ ಎಲ್‌-1160 ವಿಂಡೋಸ್ 10 ಲ್ಯಾಪ್‌ಟಾಪ್ ಮಾರುಕಟ್ಟೆಗೆ

Webdunia
ಗುರುವಾರ, 5 ಮೇ 2016 (16:13 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೈಕ್ರೋಮ್ಯಾಕ್ಸ್, ಭಾರತದ ಮಾರುಕಟ್ಟೆಗೆ ಹೊಸ ಕ್ಯಾನ್‌ವಾಸ್ ಲ್ಯಾಪ್‌ಬುಕ್ ಎಲ್‌-1160 ವಿಂಡೋಸ್ 10 ವೈಶಿಷ್ಟ್ಯದ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಈ ಲ್ಯಾಪ್‌ಟಾಪ್‌ಗಳ 10,499 ಬೆಲೆಯಲ್ಲಿ ಅಮೆಜಾನ್ ಮಾರುಕಟ್ಟೆಯಲ್ಲಿ ಲಭ್ಯವಿದೆ. 
ಕ್ಯಾನ್‌ವಾಸ್ ಲ್ಯಾಪ್‌ಬುಕ್ ಎಲ್‌-1160 ಆವೃತ್ತಿಯ ಲ್ಯಾಪ್‌ಟಾಪ್‌‌ಗಳು 1366x768 ಪಿಕ್ಸೆಲ್ಸ್ ರೆಸಲ್ಯೂಶನ್ ಜೊತೆಗೆ 11.6 ಇಂಚಿನ ಡಿಸ್‌ಪ್ಲೇ, ಕ್ವಾಡ್ ಕೋರ್ ಇಂಟೆಲ್ ಆಯ್ಟಮ್ ಝಡ್3735ಎಫ್ ಪ್ರೊಸೆಸರ್, 2ಜಿಬಿ ಡಿಡಿಆರ್‌-3 ರ್ಯಾಮ್ ಜೊತೆ ಇಂಟೆಲ್ ಎಚ್‌ಡಿ ಗ್ರಾಫಿಕ್ಸ್ ವೈಶಿಷ್ಟ್ಯವನ್ನು ಹೊಂದಿದೆ.
 
ಈ ಆವೃತ್ತಿಯ ಲ್ಯಾಪ್‌ಟಾಪ್‌ಗಳು 32 ಜಿಬಿ ಆಂತರಿಕ ಸ್ಟೋರೇಜ್ ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ಸ್ಟೋರೇಜ್ ವಿಸ್ತರಣೆಯ ಸೌಲಭ್ಯ ಹೊಂದಿದ್ದು, 802.11 ಬಿ/ಜಿ/ಎನ್‌ ವೈ-ಫೈ, ವಿ4.1 ಬ್ಲೂಟೂತ್, 2 ಯುಎಸ್‌ಬಿ ಪೋರ್ಟ್ಸ್, ಒಂದು ಎಚ್‌ಡಿಎಮ್‌ಐ ಪೋರ್ಟ್ ಮತ್ತು ಒಂದು ಈಥರ್ನೆಟ್ ಪೋರ್ಟ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.
 
ಕ್ಯಾನ್‌ವಾಸ್ ಲ್ಯಾಪ್‌ಬುಕ್ ಎಲ್‌-1160 ಆವೃತ್ತಿಯ ಲ್ಯಾಪ್‌ಟಾಪ್‌ 1.1 ಕೆ.ಜಿ ತೂಕವನ್ನು ಹೊಂದಿದ್ದು, 295x199x18 ಎಮ್‌ಎಮ್ ಅಳತೆ ಹೊಂದಿದೆ. ಈ ಲ್ಯಾಪ್‌ಟಾಪ್‌ಗಳು 0.3 ಮೆಗಾ ಪಿಕ್ಸೆಲ್ ವೆಬ್‌ಕ್ಯಾಮ್, 4100 ಎಮ್‌ಎಎಚ್ ಬ್ಯಾಟರಿ, ಸ್ಟಿರಿಯೊ ಸ್ಪೀಕರ್ ಸೆಟಪ್ ಹೊಂದಿದ್ದು, ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ ಬಣ್ಣದಲ್ಲಿ ಲಭ್ಯವಿದೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಶಾಕ್

ಮೊದಲು ಕೇಂದ್ರದಲ್ಲಿ ಅಧಿಕಾರ ಬನ್ನಿ, ಆಮೇಲೆ ಆರ್ ಎಸ್ಎಸ್ ಮಾಡುವಿರಂತೆ: ಪ್ರಿಯಾಂಕ್ ಖರ್ಗೆ ಟ್ರೋಲ್

ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೇ ಕಾರಣಗಳು: ಇದನ್ನು ಪಾಲಿಸಿದ್ರೆ ಸಾಕು

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್

ಮುಂದಿನ ಸುದ್ದಿ
Show comments