Webdunia - Bharat's app for daily news and videos

Install App

ಮಳೆ ಬಂದರೆ ನಮ್ಮಿಂದ ಎನ್ನುವವರು ಬರ ಬಂದರೆ ಹೊಣೆ ಹೊರುವುದಿಲ್ಲ: ಎಸ್.ಎಂ. ಕೃಷ್ಣ

Webdunia
ಗುರುವಾರ, 5 ಮೇ 2016 (15:56 IST)
ಮಳೆ ಬಂದರೆ ಅದಕ್ಕೆ ನಾನೇ ಕಾರಣ ಎನ್ನುವ ರಾಜಕಾರಣಿಗಳು ಬರ ಬಂದಾಗ ಅದರ ಹೊಣೆಯನ್ನು ಹೊರಲು ಸಿದ್ಧರಿರುವುದಿಲ್ಲ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಮಾಜಿ ಸಚಿವ ಹೆಚ್ ವಿಶ್ವನಾಥ್ ಅವರ 'ದಿ ಟಾಕಿಂಗ್ ಶಾಪ್'  ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಚುನಾವಣೆ ಬಳಿಕ ಪರಷ್ಪರ ದ್ವೇಷ ಬೆಳೆಸಿಕೊಳ್ಳುತ್ತೇವೆ. ನಮ್ಮ ಹಿಂಬಾಲಕರು ಅದಕ್ಕೆ ನೀರು-ಗೊಬ್ಬರ ಸುರಿಯುತ್ತಾರೆ. ಒತ್ತಡದಲ್ಲಿರುವ ನಾವು ಅವರು ಹೇಳಿದಂತೆ ನಡೆಯುತ್ತೇವೆ. ರಾಜಕಾರಣದಲ್ಲಿ ಯಾರೂ ಶತ್ರುಗಳು ಇಲ್ಲ, ಮಿತ್ರರೂ ಅಲ್ಲ. ರಾಜಕಾರಣದಲ್ಲಿ ವಿರೋಧಿಗಳ ವಿರುದ್ಧ ಅಸೂಯೆ ಇರಬಾರದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
 
ಮದ್ದೂರು ಜನ ಸೋಲಿಸಿದಾಗಲೆಲ್ಲ ನನಗೆ ಒಳ್ಳೆಯದೇ ಆಗಿದೆ. ಅವರು ಸೋಲಿಸಿದಾಗಲೆಲ್ಲ ನನಗೆ ಬಡ್ತಿ ಸಿಕ್ಕಿದೆ. ತನ್ನಿಂದ ತಾನೇ ನನಗೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬಂದಿದೆ. 1967ರಲ್ಲೂ ಸಹ ಹಾಗೇಯೇ ಆಯಿತು. ಅನಂತರ ನಡೆದಿದ್ದ ಉಪ ಚುನಾವಣೆಯಲ್ಲಿ ನಾನು ಗೆಲುವನ್ನು ಸಾಧಿಸಿದೆ. ಆಗ ಇಂದಿರಾ ಗಾಂಧಿ ಅವರ ಪರಿಚಯ ಆಯಿತು. ಸೋತಾಗಲೆಲ್ಲಾ ಬೇರೆ ಬೇರೆ ತಿರುವುಗಳು ಸಿಗುತ್ತದೆ ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಕೇಂದ್ರ ಸರ್ಕಾರದಿಂದಾಗಿ ದಿನಬಳಕೆ ವಸ್ತುಗಳಿಗೂ ಇನ್ನು ಝಡ್ ಪ್ಲಸ್ ಭದ್ರತೆ ಕೊಡಬೇಕು

ಕಾಂಗ್ರೆಸ್ ಅಧಿಕಾರ, ಮಾನಸಿಕ ಅಸ್ವಸ್ಥರಿಗೂ ಏನಾದರೂ ಸಂಬಂಧ ಇದೆಯೇ?: ಸಿ.ಟಿ.ರವಿ

ಮುಂದಿನ ಸುದ್ದಿ
Show comments