Select Your Language

Notifications

webdunia
webdunia
webdunia
webdunia

ಮರ್ಸಿಡೆಸ್ ಬೆಂಜ್ ಇ-ಕ್ಲಾಸ್ ಬೆಲೆ ರೂ.69.47 ಲಕ್ಷ

ಮರ್ಸಿಡೆಸ್ ಬೆಂಜ್ ಇ-ಕ್ಲಾಸ್ ಬೆಲೆ ರೂ.69.47 ಲಕ್ಷ
New Delhi , ಬುಧವಾರ, 1 ಮಾರ್ಚ್ 2017 (12:52 IST)
ಜರ್ಮನಿ ಲಗ್ಜುರಿ ಕಾರುಗಳ ದಿಗ್ಗಜ ಮರ್ಸಿಡೆಸ್-ಬೆಂಜ್ ತಮ್ಮ ಸೆಡಾನ್ ಇ-ಕ್ಲಾಸ್ ಮಾಡೆಲ್‌ನ ಹೊಸ ಆವೃತ್ತಿಯನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಪೆಟ್ರೋಲ್, ಡೀಸೆಲ್ ಆವೃತ್ತಿಗಳಲ್ಲಿ ಎಲ್‌ಡಬ್ಲ್ಯೂಬಿ (ಲಾಂಗ್ ವೀಲ್ ಬೇಸ್) ಇ-ಕ್ಲಾಸ್‌ನಲ್ಲಿ ಇದು ಲಭ್ಯ. 
 
1,991 ಸಿಸಿ ಇಂಜಿನ್ ಸಾಮರ್ಥ್ಯ ಇರುವ ಪೆಟ್ರೋಲ್ ಆವೃತ್ತಿ ಇ200 ಬೆಲೆ ರೂ.56.15 ಲಕ್ಷಗಳು. 2,987 ಸಿಸಿ ಇಂಜಿನ್ ಸಾಮರ್ಥ್ಯದ ಡೀಸೆಲ್ ಆವೃತ್ತಿ ಇ350ಡಿ ಬೆಲೆ ರೂ.69.47 ಲಕ್ಷಗಳು ಎಂದು ಕಂಪೆನಿ ನಿರ್ಧರಿಸಿದೆ. 
 
ಐಶಾರಾಮಿ ಕಾರುಗಳಿಗೆ ಮರ್ಸಿಡೆಸ್ ಬೆಂಚ್ ಕಾರುಗಳು ಹೆಸರುವಾಸಿ. ಶ್ರೀಮಂತರ ಕಾರು ಎಂದೇ ಇದು ಜನಪ್ರಿಯ. ಬೆಲೆಗಳು ಅಷ್ಟೇ ಮಧ್ಯಮ, ಮೇಲ್‌ಮಧ್ಯಮ ವರ್ಗದವರ ಕೈಗೆಟುಕದಷ್ಟು ಎತ್ತರದಲ್ಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆಗಿಳಿದ ನೂತನ ಹೋಂಡಾ ಆಕ್ಟೀವಾ 4ಜಿ