Select Your Language

Notifications

webdunia
webdunia
webdunia
webdunia

ಆಂಧ್ರಪ್ರದೇಶ ಸರ್ಕಾರದೊಂದಿಗೆ ಕೈ ಜೋಡಿಸಿದ ಮಾರುತಿ ಸುಜುಕಿ

ಆಂಧ್ರಪ್ರದೇಶ ಸರ್ಕಾರದೊಂದಿಗೆ ಕೈ ಜೋಡಿಸಿದ ಮಾರುತಿ ಸುಜುಕಿ
ನವದೆಹಲಿ , ಶುಕ್ರವಾರ, 1 ಜುಲೈ 2016 (16:54 IST)
ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ಪ್ರಕಾಶಂ ಜಿಲ್ಲೆಯ ದಾರ್ಸಿ ಪಟ್ಟಣದಲ್ಲಿ ಚಾಲಕ ತರಬೇತಿ ಮತ್ತು ಸಂಚಾರ ಸಂಶೋಧನೆ ಘಟಕವನ್ನು ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದ ಜೊತೆ ಕೈಜೊಡಿಸಿ ಒಪ್ಪಂದಕ್ಕೆ ಸಹಿ ಹಾಕಿದೆ.
 
ಚಾಲಕ ತರಬೇತಿ ಮತ್ತು ಸಂಚಾರ ಸಂಶೋಧನೆ ಘಟಕವನ್ನು ಸ್ಥಾಪಿಸಲು ಆಂಧ್ರಪದೇಶ ಸರಕಾರ 20 ಎಕರೆ ಭೂಮಿಯನ್ನು ನೀಡಿದೆ. ಈ ಸಂಸ್ಥೆಯನ್ನು ಮಾರುತಿ ಸುಜುಕಿ ಸಂಸ್ಥೆ ನಿರ್ವಹಣೆ ಮಾಡಲಿದೆ. ಚಾಲಕ ತರಬೇತಿ ಮತ್ತು ಸಂಚಾರ ಸಂಶೋಧನೆ ಘಟಕದ ಕಟ್ಟಡ ಮತ್ತು ತರಬೇತಿಗಾಗಿ ಆಗಮಿಸುವ ವಿದ್ಯಾರ್ಥಿಗಳಿಗಾಗಿ ವಸತಿ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳ ವ್ಯವಸ್ಥೆ 2018ರಲ್ಲಿ ಪೂರ್ಣಗೊಳ್ಳಲಿವೆ  ಎನ್ನಲಾಗಿದೆ.    
 
ಮಾರುತಿ ಸುಜುಕಿ ಇಂಡಿಯಾ ಪಿಪಿಪಿ ಮಾದರಿ ಅಡಿ ದಕ್ಷಿಣ ಭಾರತದಲ್ಲಿ ಮೊದಲ ಐಡಿಟಿಆರ್ ಹೊಂದಿದೆ. ವಿವಿಧ ಐಡಿಟಿಆರ್ ಸೇರಿದಂತೆ ಗುಜರಾತ್ ಇನ್‌‍ಸ್ಟಿಟ್ಯೂಟ್ ಆಫ್ ಡ್ರೈವಿಂಗ್, ತಾಂತ್ರಿಕ ತರಬೇತಿ ಮತ್ತು ಸಂಶೋಧನೆ (ಐಜಿಐಡಿಟಿಟಿಆರ್), ವಡೋದರದಲ್ಲೂ ಆಸಕ್ತರು ತರಬೇತಿ ಪಡೆಯಬಹುದಾಗಿದೆ ಎಂದು ಆಂಧ್ರ ಸರಕಾರದ ಮೂಲಗಳು ತಿಳಿಸಿವೆ. 
 
ಭಾರತದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಇಂಡಿಯಾ, ಪ್ಯಾಸೆಂಜರ್ ಕಾರ್, ಯುಟಿಲಿಟಿ ವಾಹನ ಮತ್ತು ವ್ಯಾನ್‌ಗಳನ್ನು ತಯಾರಿಸುತ್ತದೆ. ಈ ಸಂಸ್ಥೆ, ಪೂರ್ವ ಸ್ವಾಮ್ಯದ ಕಾರು ಮಾರಾಟ ಮತ್ತು ಕಾರು ಹಣಕಾಸು ಸೇವೆಯನ್ನು ನೀಡುತ್ತದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

2020ರ ವೇಳೆಗೆ ರೋಲ್ಸ್ ರಾಯ್ಸ್‌ನಿಂದ ಸ್ವಯಂಚಾಲಿತ ಹಡಗುಗಳಿಗೆ ಚಾಲನೆ