ಗೂಗಲ್ ಹೊಸ ಆಪರೇಟಿಂಗ್ ಸಿಸ್ಟಂ ಆಂಡ್ರಾಯ್ಡ್ 7.0 ನೌಗಟ್ ಕೇವಲ ಗೂಗಲ್ ಫಿಕ್ಸೆಲ್ ಫೋನ್‌ಗಳಲ್ಲಿ ಮಾತ್ರ ಲಭ್ಯವಿದೆ. ಆದರೆ ಇದೇ ಮೊದಲ ಬಾರಿಗೆ ಎಲ್‍ಜಿ ಸ್ಮಾರ್ಟ್‌ಫೋನ್ ವಿ 20 ಲೇಟೆಸ್ಟ್ ಆಪರೇಟಿಂಗ್ ಸಿಸ್ಟಂ ಮೂಲಕ ಭಾರತೀಯ ಮಾರುಕಟ್ಟೆಗೆ ದಾಂಗುಡಿ ಇಡುತ್ತಿದೆ.
ಶೀಘ್ರದಲ್ಲೇ ಎಲ್‍ಜಿ ವಿ20 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರಲಿದೆ. 4ಜಿ LTE, 7 ಇಂಚು ಐಪಿಎಸ್ ಕ್ವಾಂಟಮ್ ಡಿಸ್ಪ್ಲೆ, ಕ್ವಾಡ್‌ಕೋರ್ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 820 ಪ್ರೊಸೆಸರ್, 4ಜಿಬಿ ರ್ಯಾಮ್, 32 ಜಿಬಿ ಇಂಟರ್ನಲ್ ಮೆಮರಿ (256 ಜಿಬಿವರೆಗೂ ಹೆಚ್ಚಿಸಿಕೊಳ್ಳಬಹುದು).
ಇನ್ನು ಕ್ಯಾಮೆರಾ ವಿಷಯಕ್ಕೆ ಬಂದರೆ 5 ಎಂಪಿ ಮುಂಬದಿ ಕ್ಯಾಮೆರಾ, 8 ಎಂಪಿ ಹಿಂಬದಿ ಕ್ಯಾಮೆರಾ, 3,200 ಎಂಎಎಚ್ ಬ್ಯಾಟರಿ...ಒಳಗೊಂಡಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಆಂಡ್ರಾಯ್ಡ್ 7 ಆಪರೇಟಿಂಗ್ ಸಿಸ್ಟಂ. ಈ ಮೊಬೈಲ್ ಬೆ ಇನ್ನೂ ನಿರ್ಧಾರವಾಗಿಲ್ಲ. ಬಿಡುಗಡೆ ಬಳಿಕ ಬೆಲೆ ಗೊತ್ತಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.