ಚೀನಾ ಮೂಲದ ಹ್ಯಾಂಡ್ಸೆಟ್ ತಯಾರಕರಾಗಿರುವ ಲೆನೋವೋ, ಭಾರತದ ಮಾರುಕಟ್ಟೆಯಲ್ಲಿ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್ಪೋನ್ಗಳ ಬೆಲೆ ಕಡಿತಗೊಳಿಸುವುದಾಗಿ ಘೋಷಿಸಿದೆ.
ಭಾರದ ಮಾರುಕಟ್ಟೆಯಲ್ಲಿ ಒಂದು ಸಾವಿರ ರೂಪಾಯಿ ಬೆಲೆ ಕಡಿತಗೊಂಡಿರುವ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್ಪೋನ್ಗಳು ಗ್ರಾಹಕರಿಗೆ 10,999 ರೂಪಾಯಿಗಳಲ್ಲಿ ಲಭ್ಯವಾಗಲಿದೆ. ಈ ಕೂಡುಗೆ ಇಂದು ಮಾತ್ರ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ಜನವರಿ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕೆ-4 ನೋಟ್ ಆವೃತ್ತಿಯ ಸ್ಮಾರ್ಟ್ಪೋನ್ಗಳು ಗ್ರಾಹಕರಿಗೆ 11,999 ರೂಪಾಯಿ ಬೆಲೆಯಲ್ಲಿ ಲಭ್ಯವಿದ್ದವು.
ಕೆ-4 ನೋಟ್ ಆವೃತ್ತಿ ಸ್ಮಾರ್ಟ್ಪೋನ್ಗಳ ವೈಶಿಷ್ಟ್ಯ
* ಫಿಂಗರ್ಪ್ರಿಂಟ್ ಸೆನ್ಸಾರ್
* ಆಕ್ಟಾ ಕೋರ್ ಪ್ರೊಸೆಸರ್
* 3 ಜಿಬಿ ರ್ಯಾಮ್
* ವರ್ಚುವಲ್ ರಿಯಾಲಿಟಿ ಬೆಂಬಲದೊಂದಿಗೆ 5.5 ಇಂಚ್ ಡಿಸ್ಪ್ಲೇ
* 5.5 ಇಂಚ್ ಫುಲ್ ಎಚ್ಡಿ (1080x1920p) ಡಿಸ್ಪ್ಲೇ
* 3 ಪ್ರೊಟೆಕ್ಷನ್ ಗೊರಿಲ್ಲಾ ಗ್ಲಾಸ್
* 16 ಜಿಬಿ ಆಂತರಿಕ ಸ್ಟೋರೇಜ್ ( 128 ಜಿಬಿ ವಿಸ್ತರಣೆಯ ಸಾಮರ್ಥ್ಯ)
* 64-ಬಿಟ್ ಆಕ್ಟಾ ಕೋರ್ ಮೀಡಿಯಾ ಟೆಕ್ 6753 ಚಿಪ್ಸೆಟ್
* 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
* 3,300 ಎಮ್ಎಎಚ್ ಸಾಮರ್ಥ್ಯದ ಬ್ಯಾಟರಿ
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.