Webdunia - Bharat's app for daily news and videos

Install App

ಲೆನೋವೋ ಐಡಿಯಾಪ್ಯಾಡ್ ವೈ-700 ಲ್ಯಾಪ್‌ಟಾಪ್ ಮಾರುಕಟ್ಟೆಗೆ!

Webdunia
ಮಂಗಳವಾರ, 5 ಜುಲೈ 2016 (11:41 IST)
ಚೀನಾ ಮೂಲದ ಸಂಸ್ಥೆಯಾಗಿರುವ ಲೆನೋವೋ, ಗೇಮಿಂಗ್ ವೈಶಿಷ್ಟ್ಯದ ಐಡಿಯಾಪ್ಯಾಡ್ ವೈ-700 ಆವೃತ್ತಿಯ ಲ್ಯಾಪ್‌ಟಾಪ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಆವೃತ್ತಿಯ ಲ್ಯಾಪ್‌ಟಾಪ್‌ಗಳು  99,990 ರೂಪಾಯಿಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. 
 
ಐಡಿಯಾಪ್ಯಾಡ್ ವೈ-700 ಆವೃತ್ತಿಯ ಲ್ಯಾಪ್‌ಟಾಪ್‌ಗಳು 15.6 ಫುಲ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, ಇಂಟೆಲ್ ಕೋರ್ ಐ7-6700ಎಚ್‌ಕ್ಯೂ (3.5ಜಿಎಚ್‌ಝಡ್ ಟೂ 2.6ಜಿಎಚ್‌ಝಡ್, 6 ಎಮ್ ಕ್ಯಾಚಿ) ಪ್ರೊಸೆಸರ್ ಒಳಗೊಂಡಿದ್ದು, 16 ಜಿಬಿ ರ್ಯಾಮ್ ಮತ್ತು 4ಜಿಬಿ ಎನ್ವಿಡಿಯಾ ಜಿಟಿಎಕ್ಸ್ 960ಎಮ್ ಜಿಪಿಯು ಗ್ರಾಫಿಕ್ಸ್ ವೈಶಿಷ್ಟ್ಯವನ್ನು ಹೊಂದಿದೆ. 
 
ಈ ಹೊಸ ಆವೃತ್ತಿಯ ಲ್ಯಾಪ್‌ಟಾಪ್‌ಗಳು 1 ಟಿ ಎಚ್‌ಡಿಡಿ ಜೊತೆಗೆ 128 ಜಿಬಿ ಎಸ್‌ಎಸ್‌ಡಿ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಡಾಲ್ಬಿ ಆಡಿಯೋ ಜೆಬಿಎಲ್ ಸ್ಪೀಕರ್, ವಿಂಡೋಸ್ 10 ಓಎಸ್ ಮತ್ತು ಆಪ್ಟಿಮೈಸ್ಡ್ ಕೂಲಿಂಗ್ ತಂತ್ರಜ್ಞಾನ ಹೊಂದಿದೆ.
 
ಕಂಪೆನಿಯು ಮೂರು ವರ್ಷಗಳ ಅವಧಿಗೆ 4,499 ಹೆಚ್ಚುವರಿ ಖಾತರಿ ನೀಡಿದ್ದು, ವಿದ್ಯಾರ್ಥಿಗಳಿಗಾಗಿ ಮೂರು ವರ್ಷಗಳ ಆಕಸ್ಮಿಕ ಹಾನಿ ರಕ್ಷಣೆ ನೀಡಿದೆ. ಐಡಿಯಾಪ್ಯಾಡ್ ವೈ-700 ಆವೃತ್ತಿಯ ಲ್ಯಾಪ್‌ಟಾಪ್‌ಗಳು ಸಂಸ್ಥೆಯ ಅಧಿಕೃತ ಆನ್‌ಲೈನ್ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ರಾಜ್ಯದಲ್ಲಿ ಇಂದು ಹೇಗಿರಲಿದೆ ಮಳೆ ಪರಿಸ್ಥಿತಿ ಇಲ್ಲಿದೆ ವಿವರ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಮುಂದಿನ ಸುದ್ದಿ
Show comments