21 ವರ್ಷ ವಯಸ್ಸಿನ ಬಿಟ್ಸ್ ಪಿಲಾನಿ, ಗೋವಾ ಕ್ಯಾಂಪಸ್ ವಿದ್ಯಾರ್ಥಿ ಕ್ರುನಾಲ್ ಕಿಶೋರ್ ಭಾಯ್ ಪಟೇಲ್ ಅವರಿಗೆ ಗೂಗಲ್ ಕಂಪನಿ ವಾರ್ಷಿಕ 1.4 ಕೋಟಿ ವೇತನದ ಆಫರ್ ನೀಡಿದೆ. ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂನಲ್ಲಿ ಅವರನ್ನು ನೇಮಕ ಮಾಡಲಿದೆ.
2015ರ ಅಕ್ಟೋಬರ್‌ನಲ್ಲಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕ ಅವರು ಕಂಪನಿಯನ್ನು ಸೇರಲಿದ್ದಾರೆ. ಪಟೇಲ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಇ(ಹಾನರ್ಸ್) ಮತ್ತು ಗಣಿತದಲ್ಲಿ ಎಂಎಸ್‌ಸಿ ಹಾನರ್ಸ್ ಡಿಗ್ರಿಯನ್ನು ಬಿಟ್ಸ್‌ನಲ್ಲಿ ಮಾಡುತ್ತಿದ್ದಾರೆ.
ಏಷ್ಯಾ ಪೆಸಿಫಿಕ್‌ನ ವಿವಿಧ ವಿವಿಗಳಿಂದ 2015ರಲ್ಲಿ ಪದವೀಧರರಾಗುವ ವಿದ್ಯಾರ್ಥಿಗಳಿಗೆ ಗೂಗಲ್ ಸಂಸ್ಥೆ ಎಪಿಎಸಿ ಪರೀಕ್ಷೆ ಮಾಡಿದೆ. ಪಟೇಲ್ ಭಾರತದಲ್ಲಿ ಎರಡನೇ ಶ್ರೇಯಾಂಕ ಮತ್ತು ಒಟ್ಟಾರೆಯಾಗಿ 8ನೇ ಶ್ರೇಯಾಂಕ ಪಡೆದಿದ್ದಾರೆ.