Select Your Language

Notifications

webdunia
webdunia
webdunia
webdunia

ಕರ್ನಾಟಕ ಸರ್ಕಾರದ ಕ್ಯಾಲೆಂಡರ್ ಬಿಡುಗಡೆ

ಕರ್ನಾಟಕ ಸರ್ಕಾರದ ಕ್ಯಾಲೆಂಡರ್ ಬಿಡುಗಡೆ
Bangalore , ಗುರುವಾರ, 29 ಡಿಸೆಂಬರ್ 2016 (11:27 IST)
ಕರ್ನಾಟಕ ಸರ್ಕಾರದ 2017 ನೇ ವರ್ಷದ ಕ್ಯಾಲೆಂಡರ್ ಮತ್ತು ಡೈರಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಇಂದು ಬಿಡುಗಡೆ ಮಾಡಿದರು.
 
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಕೃಷಿ ಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಅನ್ನಭಾಗ್ಯ, ಗಾಂಧೀಜಿ ಕನಸು ಕರ್ನಾಟಕದಲ್ಲಿ ನನಸು ಮತ್ತು ಮೆಟ್ರೋಗಳ ವರ್ಣ ರೇಖಾ ಚಿತ್ರದಿಂದ ಕೂಡಿರುವ ಈ ಕ್ಯಾಲೆಂಡರ್ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಮತ್ತು ಚಿತ್ರಣಗಳನ್ನು ಒಳಗೊಂಡಿದೆ.
 
ಖ್ಯಾತ ರೇಖಾಚಿತ್ರ ಕಲಾವಿದ ಚಂದ್ರನಾಥ್ ಆಚಾರ್ಯ ಅವರು ರಚಿಸಿರುವ ಈ ವಿಶೇಷ ಕ್ಯಾಲೆಂಡರಿನ ಪರಿಕಲ್ಪನೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರದ್ದಾಗಿದೆ.
 
ಕಾರ್ಯಕ್ರಮದಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಜಯ್ ಸೇಠ್, ಸರ್ಕಾರಿ ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಯ ಇಲಾಖೆಯ ನಿರ್ದೇಶಕ ಎಂ. ರವಿಶಂಕರ್ ಹಾಗೂ ಸರ್ವ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ: ಪಿ.ಸಿ. ಜಾಫರ್ ಉಪಸ್ಥಿತರಿದ್ದರು. ಸರ್ಕಾರಿ ಮುದ್ರಣಾಲಯದಲ್ಲಿ ರೂ.20 ರೂ.ಗಳಿಗೆ ಕ್ಯಾಲೆಂಡರ್ ಮತ್ತು ರೂ.50 ಗಳಿಗೆ ಡೈರಿ ಲಭ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪೂಜಾರಿ ಹೇಳಿಕೆಗೆ ಐ ಡೋಂಟ್ ವಾಂಟೂ ರಿಆ್ಯಕ್ಟ್ ಎಂದು ಸಿಎಂ ಸಿದ್ದರಾಮಯ್ಯ