Select Your Language

Notifications

webdunia
webdunia
webdunia
webdunia

ಕೈಗಾರಿಕೆ- ಸರಕಾರಿ ಸಹಭಾಗಿತ್ವದಲ್ಲಿ ಪಾಲುದಾರಿಕೆ: ಸಿಎಂ ಸಿದ್ದರಾಮಯ್ಯ

ಕೈಗಾರಿಕೆ- ಸರಕಾರಿ ಸಹಭಾಗಿತ್ವದಲ್ಲಿ ಪಾಲುದಾರಿಕೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು , ಗುರುವಾರ, 30 ಜೂನ್ 2016 (15:54 IST)
ರಾಜ್ಯದಲ್ಲಿ ವಹಿವಾಟು ಸುಲಭವಾಗಿಸಲು ಕೈಗಾರಿಕೆ- ಸರಕಾರದ ಸಹಭಾಗಿತ್ವದಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
 
ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ(ಫಿಕ್ಕಿ) 99 ನೇಯ ವಾರ್ಷಿಕ ಮಹಾ ಸಭೆಯಲ್ಲಿ, ಮೇಕ್ ಇನ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ ಮುಂದಿನ ದಾರಿ ಎನ್ನುವ ಶೀರ್ಷಿಕೆಯಡಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
 
ಕರ್ನಾಟಕ ರಾಜ್ಯದಲ್ಲಿ ವ್ಯಾಪಾರ ವಹಿವಾಟು ಸುಲಭವಾಗಿ ನಡೆಸಲು ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.  
 
ಇನ್‌ವೆಸ್ಟ್ ಕರ್ನಾಟಕ ಬ್ಯ್ರಾಂಡ್ ಅಡಿಯಲ್ಲಿ  ಕೈಗಾರಿಕೆ- ಸರಕಾರದ ಸಹಭಾಗಿತ್ವಕ್ಕೆ ಹಲವಾರು ರೀತಿಯ ಸೇವೆಗಳನ್ನು ನೀಡಲು ರಾಜ್ಯ ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.
 
ಕರ್ನಾಟಕ ರಾಜ್ಯ ಹೆಚ್ಚಿನ ಬೆಳವಣಿಗೆ ಪಥದಲ್ಲಿ ಸಾಗುತ್ತಿದ್ದು, ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವತ್ತ ಸರಕಾರ ಚಿತ್ತ ಹರಿಸಿದೆ ಎಂದಿದ್ದಾರೆ.
 
ಕರ್ನಾಟಕ ರಾಜ್ಯವನ್ನು ಸಂಪತ್ಭರಿತ ರಾಜ್ಯವನ್ನಾಗಿ ಮಾಡಬೇಕು ಎಂಬುದು ನಮ್ಮ ಗುರಿ. ಇನ್‌ವೆಸ್ಟ್ ಕರ್ನಾಟಕ ಅಂತ್ಯವಲ್ಲ, ರಾಜ್ಯದ ಇತಿಹಾಸವನ್ನು ಬದಲಿಸುವ ನಿಟ್ಟಿನಲ್ಲಿ ಇದೊಂದು ಆರಂಭ. ದೇಶದಲ್ಲಿಯೇ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಇಂಜಿನ್‌ನಂತೆ ಮಾರ್ಪಡಿಸುವುದೇ ನಮ್ಮ ಗುರಿಯಾಗಿದೆ ಎಂದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗ್ರೀನ್ ಸೆಸ್ ಪಾವತಿಸಿದ್ರೆ ಡೀಸೆಲ್‌ ವಾಹನಗಳಿಗೆ ನೋಂದಣಿ: ಸುಪ್ರೀಂ ಕೋರ್ಟ್