Webdunia - Bharat's app for daily news and videos

Install App

ಫೇಸ್‌ಬುಕ್ ನಿಮ್ಮ ಗೆಳೆಯರನ್ನು ಆಯ್ಕೆ ಮಾಡುವಂತೆ ಸಲಹೆ ಕೊಡಲು ಕಾರಣವೇನು ಗೊತ್ತೆ?

Webdunia
ಬುಧವಾರ, 29 ಜೂನ್ 2016 (16:36 IST)
ಸಾಮಾನ್ಯವಾಗಿ ಕೆಲವರಿಗೆ ಕೆಲವು ಸ್ನೇಹಿತರ ಮುಖ ಪರಿಚಯವಿದ್ದು ಅವರ ಹೆಸರು ತಿಳಿದಿರುವುದಿಲ್ಲ ಅಂತಹ ಸ್ನೇಹಿತರನ್ನು ಫೇಸ್‌ಬುಕ್‌ನ "ಪಿಪಲ್ ಯು ಮೆ ನೋ" ಆಯ್ಕೆಯಲ್ಲಿ ಕಂಡಾಗ ಬಳಕೆದಾರರಿಗೆ ಆಶ್ಚರ್ಯವಾಗುತ್ತದೆ. ಆದರೆ, ಇದು ಬಳಕೆದಾರರ ಪೋನ್‌ ಲೋಕೇಶನ್ ಆಧಾರದ ಮೇಲೆ ಸ್ನೇಹಿತರನ್ನು ಸೂಚಿಸುತ್ತದೆ ಎನ್ನುವುದು ಬಹುತೇಕ ಫೇಸ್‌ಬುಕ್ ಬಳಕೆದಾರರಿಗೆ ಗೊತ್ತಿಲ್ಲ.
 
ಕೆಲವೊಂದು ಬಾರಿ ಫೇಸ್‌ಬುಕ್ ತೋರಿದ ನಿಕರತೆ ಬಳಕೆದಾರರಲ್ಲಿ ಗೊಂದಲದೊಂದಿಗೆ ಅಚ್ಚರಿಯೂ ಮೂಡಿಸುತ್ತದೆ.
 
ಬಳಕೆದಾರರು ತಮ್ಮ ಪೋನ್‌ಗಳಲ್ಲಿ ಜಿಪಿಎಸ್ ಡೇಟಾ ಆಯ್ಕೆಯನ್ನು ಆಯ್ದುಕೊಂಡು ತಮ್ಮ ಲೋಕೆಷನ್‌ಗಳನ್ನು ಶೇರ್ ಮಾಡಿಕೊಂಡಾಗ ಮುಖ ಪರಿಚಯವಿರುವ ಸ್ನೇಹಿತರನ್ನು ಅಥವಾ ಲೋಕೇಶನ್ ಆಧರಿಸಿ "ಪಿಪಲ್ ಯು ಮೆ ನೋ" ಆಯ್ಕೆಯಲ್ಲಿ ಸೂಚಿಸುತ್ತದೆ. 
 
ಇಬ್ಬರು ಫೇಸ್‌ಬುಕ್ ಬಳಕೆದಾರರು ಒಂದೇ ಸ್ಥಳದಿಂದ ಒಂದೆ ಸಮಯದಲ್ಲಿ ಸ್ಮಾರ್ಟ್‌ಪೋನ್ ಬಳಕೆ ಮಾಡಿದ್ದಲ್ಲಿ, ಅವರು ಮಾಡಿಕೊಂಡ ಶೇರುಗಳು ಅವರ ಫೇಸ್‌ಬುಕ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಗೆಳೆಯರಿಗೆ ರವಾನೆಯಾಗುತ್ತದೆ.
 
ಫೇಸ್‌ಬುಕ್ ಸೆಟ್ಟಿಂಗ್‌ನಲ್ಲಿರುವ ಆಲ್‌ವೇಸ್ ಆಯ್ಕೆಯನ್ನು ಆಯ್ದುಕೊಂಡು ಫೇಸ್‌ಬುಕ್‌ ಬಳಕೆ ಮಾಡಿದರೆ ಬಳಕೆದಾರರ ಲೋಕೆಷನ್ ಶೇರ್ ಆಗುತ್ತದೆ. ಬಳಕೆದಾರರು ತಮ್ಮ ಲೋಕೇಶನ್ ಶೇರ್ ಮಾಡಲು ಬಯಸದಿದ್ದರೆ ಫೇಸ್‌ಬುಕ್ ಸೆಟ್ಟಿಂಗ್‌ನಲ್ಲಿರುವ ನೆವರ್ ಆಯ್ಕೆಯನ್ನು ಆಯ್ದುಕೊಂಡು ಫೇಸ್‌ಬುಕ್ ಬಳಸಿದಲ್ಲಿ ನಿಮ್ಮ ಲೋಕೇಶನ್ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. 
 
ಏತನ್ಮಧ್ಯೆ, ಫೇಸ್‌ಬುಕ್ ಬಳಕೆದಾರರಿಗೆ ಸ್ನೇಹಿತರ ಸೂಚನೆಗಳು ಏಕೆ ಬರುತ್ತವೆ ಎನ್ನುವುದಕ್ಕೆ ಹಲವು ಕಾರಣಗಳಿವೆ ಎಂದು ದೈತ್ಯ ಸಾಮಾಜಿಕ ಜಾಲತಾಣ ಫೇಸ್‌ಬುಕ್ ಸ್ಪಷ್ಟಪಡಿಸಿದೆ. 
 
ಇಬ್ಬರು ಫೇಸ್‌ಬುಕ್ ಬಳಕೆದಾರರಲ್ಲಿ ಸಾಮ್ಯತೆ ಇದ್ದಲ್ಲಿ ಅವರನ್ನು ಸ್ನೇಹಿತರಾಗುವಂತೆ ಸೂಚನೆ ನೀಡುತ್ತಿದೆ ಎಂದು ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments