Webdunia - Bharat's app for daily news and videos

Install App

ಸಿಎಂ ಸಿದ್ದರಾಮಯ್ಯನವರ ಸಾಧನೆ ಕುರಿತಾದ ಪುಸ್ತಕ: ಶಾಲೆಗಳಲ್ಲಿ ಕಡ್ಡಾಯ

Webdunia
ಬುಧವಾರ, 29 ಜೂನ್ 2016 (16:24 IST)
ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಗ್ರಂಥಾಲಯಗಳಲ್ಲಿ ಸಿಎಂ ಸಿದ್ದರಾಮಯ್ಯನವರ ಸಾಧನೆ ಕುರಿತಾದ ಪುಸ್ತಕದ ಎರಡು ಪ್ರತಿಗಳನ್ನಾದರೂ ಇಡಲೇಬೇಕೆಂದು ನಿರ್ದೇಶನ ನೀಡಲಾಗಿದ್ದು ಈಗ ಇದೊಂದು ಬಹುದೊಡ್ಡ ವಿವಾದವನ್ನು ಹುಟ್ಟಿಹಾಕಿದೆ. 

ಸಾರ್ವಜನಿಕ ಮಾಹಿತಿ ಇಲಾಖೆ ಈ ಕುರಿತು ಎಲ್ಲ ಶಾಲೆಗಳಿಗೆ ಸುತ್ತೋಲೆಯನ್ನು ಕಳುಹಿಸಿದೆ ಎಂದು ಹೇಳಲಾಗುತ್ತಿದೆ, 300 ರೂಪಾಯಿ ಮುಖಬೆಲೆಯ ಪುಸ್ತಕದಲ್ಲಿ ಸಿದ್ದರಾಮಯಯ್ನವರನ್ನು ಮಾಜಿ ಸಿಎಂ ದೇವರಾಜ್ ಅರಸ್ ಅವರಿಗೆ ಹೋಲಿಸಲಾಗಿದೆ. 
 
ಇದು ರಾಜಕೀಯ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವ ಕ್ರಮ ಎಂದು ಆರೋಪಗಳು ಕೇಳಿ ಬರುತ್ತಿದ್ದು, ಈ ಪುಸ್ತಕ ಕೇವಲ ರೆಫರೆನ್ಸ್‌ಗಾಗಿ ಮಾತ್ರ ಎಂದು ಶಿಕ್ಷಣ ಇಲಾಖೆ ಸಮಜಾಯಿಸಿ ನೀಡಿದೆ. 
 
ಸಿಎಂ ಅವರನ್ನು ಸಮರ್ಥಿಸಿಕೊಂಡಿರುವ ಶಿಕ್ಷಣ ಮಂತ್ರಿ  ತನ್ವೀರ್ ಸೇಠ್, ಪುಸ್ತಕ ವಿದ್ಯಾರ್ಥಿಗಳಿಗಾಗಿ ಕಡ್ಡಾಯವಲ್ಲ. ಸಿಎಂ ದೃಷ್ಟಿಕೋನವನ್ನು ಹೊಂದಿರುವ ಪ್ರತ್ಯೇಕ ಪುಸ್ತಕವಿದು. ಪಠ್ಯಕ್ರಮದ ಒಂದು ಅಧ್ಯಾಯವಲ್ಲ ಎಂದು ಹೇಳಿದ್ದಾರೆ. 
 
ಏತನ್ಮಧ್ಯೆ, ಈ ಕುರಿತು ಕಿಡಿಕಾರಿರುವ ಬಿಜೆಪಿ ಇಂತಹ ಪುಸ್ತಕಗಳು ಹೇಗೆ ಮಕ್ಕಳ ಜ್ಞಾನವನ್ನು ಹೆಚ್ಚಿಸಬಹಲ್ಲವು. ಈ ಪುಸ್ತಕದಿಂದ ಯಾರಿಗೆ ಉಪಯೋಗ? ಪ್ರಕಾಶಕರಿಗೋ ಅಥವಾ ಸಿಎಂ ಗೋ? ಈ  ಪುಸ್ತಕಕ್ಕಿಂತ ಶಾಲೆಯಲ್ಲಿ ಇರಲೇಬೇಕಾದ ಬಹಳಷ್ಟು ಪುಸ್ತಕಗಳಿವೆ. ಸುತ್ತೋಲೆಯನ್ನು ಹಿಂಪಡೆಯಬೇಕು ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ವಿಷಯವನ್ನು ನಾವು ವಿಧಾನಸಭೆಗೆ ಕೊಂಡೊಯ್ಯುತ್ತೇವೆ ಎಂದಿದೆ. 
 
ತುಮಕೂರು ಮಹಾದೇವಯ್ಯ ಪ್ರಧಾನ ಸಂಪಾದಕತ್ವ ಹಾಗೂ ಜಿಜಿ ನಾಗರಾಜು ಅವರ ಸಂಪಾದಕತ್ವದಲ್ಲಿ ಹೊರ ಬಂದಿರುವ 'ಇಟ್ಟ ಗುರಿ ದಿಟ್ಟ ಹೆಜ್ಜೆ' -ಸಮಾನತೆಯ ಸಾಧಕನ ಸಂಕಲ್ಪದ ಹಾದಿ', ಎಂಬ ಪುಸ್ತಕ ಇದಾಗಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments