ನವದೆಹಲಿ: ಟೆಲಿಕಾಂ ಕ್ಷೇತ್ರದಲ್ಲಿ ನೂತನ ಕ್ರಾಂತಿ ಹುಟ್ಟು ಹಾಕಿದ ರಿಲಯನ್ಸ್ ಸಂಸ್ಥೆ ಇದೀಗ ತನ್ನ ಜಿಯೋ ಸಿಮ್ ಬಳಸಲು ಸಾಧ್ಯವಾಗುವಂತಹ ಅಗ್ಗದ ದರದ 4 ಜಿ ಫೋನ್ ತಯಾರಿಸಲು ಇಂಟೆಕ್ಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಅಗ್ಗದ ದರದಲ್ಲಿ 4 ಜಿ ಫೋನ್ ಗಳನ್ನು ಒದಗಿಸಲು ಚಿಂತನೆ ನಡೆಸಿರುವುದಾಗಿ ಸಂಸ್ಥೆ ಇತ್ತೀಚೆಗಷ್ಟೇ ಹೇಳಿಕೊಂಡಿತ್ತು. ಇದೀಗ ಪ್ರಮುಖ ಮೊಬೈಲ್ ಉತ್ಪನ್ನಕರಾದ ಇಂಟೆಕ್ಸ್ ಜತೆಗೆ ಒಪ್ಪಂದ ಮಾಡಿಕೊಂಡಿರುವ ಜಿಯೋ ಸಂಸ್ಥೆ ಹೊಸ ಫೋನ್ ಗಳ ತಯಾರಿಗೆ ಗ್ರೀನ್ ಸಿಗ್ನಲ್ ನೀಡಿದೆ.
ಮುಂಬರುವ ಅಗಸ್ಟ್ ತಿಂಗಳಲ್ಲಿ ಈ ಬಗ್ಗೆ ಗ್ರಾಹಕರಿಗೆ ಸ್ಪಷ್ಟವಾಗಿ ಘೋಷಣೆ ನೀಡಲಿದೆ. ಇದರೊಂದಿಗೆ ಮೊಬೈಲ್ ಉತ್ಪನ್ನ ಕ್ಷೇತ್ರದಲ್ಲಿ ರಿಲಯನ್ಸ್ ಮತ್ತಷ್ಟು ಕ್ರಾಂತಿ ಹುಟ್ಟುಹಾಕಲಿದೆ. ಸ್ಮಾರ್ಟ್ ಫೋನ್ ಉದ್ಯಮ ಈ ಬೆಳವಣಿಗೆಯಿಂದ ತಲ್ಲಣಗೊಳ್ಳಲಿದೆ. ಈಗಾಗಲೇ ಮೊಬೈಲ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಇಂಟೆಕ್ಸ್ ಸಂಸ್ಥೆ, ರಿಲಯನ್ಸ್ ಸಂಸ್ಥೆ ಜತೆಗೆ ಚರ್ಚಿಸಿ ನಂತರವೇ ಅಗ್ಗದ ದರದ ಮಾಡೆಲ್ ಗಳನ್ನು ಮಾರುಕಟ್ಟೆಗೆ ಬಿಡಲು ಉದ್ದೇಶಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ