Select Your Language

Notifications

webdunia
webdunia
webdunia
webdunia

ಭಾರತದ ಮಾರುಕಟ್ಟೆಗೆ ಇಂಟೆಕ್ಸ್ ಆಕ್ವಾ ಸೆನ್ಸ್ 5.1 ಸ್ಮಾರ್ಟ್‌ಪೋನ್‌ ಬಿಡುಗಡೆ

ಭಾರತದ ಮಾರುಕಟ್ಟೆಗೆ ಇಂಟೆಕ್ಸ್ ಆಕ್ವಾ ಸೆನ್ಸ್ 5.1 ಸ್ಮಾರ್ಟ್‌ಪೋನ್‌ ಬಿಡುಗಡೆ
ನವದೆಹಲಿ , ಮಂಗಳವಾರ, 21 ಜೂನ್ 2016 (12:17 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಇಂಟೆಕ್ಸ್, ಇಂಟೆಕ್ಸ್ ಆಕ್ವಾ ಸೆನ್ಸ್ 5.1 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯ ಸ್ಮಾರ್ಟ್‌ಪೋನ‌್‌ಗಳು ಗ್ರಾಹಕರಿಗೆ 3,999 ರೂಪಾಯಿ ದರದಲ್ಲಿ ಲಭ್ಯವಾಗಲಿದೆ. 
ಇಂಟೆಕ್ಸ್ ಆಕ್ವಾ ಸೆನ್ಸ್ 5.1 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ದೊಡ್ಡ ಸ್ಕ್ರೀನ್ ಹೊಂದಿದ್ದು, ಆಂಡ್ರಾಯ್ಡ್ ಲಾಲಿಪಾಪ್ ಮತ್ತು ಉತ್ತಮ ಗುಣಮಟ್ಟದ ಪ್ರೊಸೆಸರ್ ಹೊಂದಿರುವ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಪೋನ್ ಎಂದು ಸಂಸ್ಥೆ ಹೇಳಿಕೊಂಡಿದೆ.
 
ಈ ಹೊಸ ಆವೃತ್ತಿಯ ಸ್ಮಾರ್ಟ್‌‍ಪೋನ್‌ಗಳು 5.1 ಇಂಚ್ ಡಿಸ್‌ಪ್ಲೇ, ಆಂಡ್ರಾಯ್ಡ್ ಲಾಲಿಪಾಪ್ 5.1, 2 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ವಿಜಿಎ ಫ್ರಂಟ್ ಕ್ಯಾಮೆರಾ ಜೊತೆಗೆ 2500 ಎಮ್‌ಎಚ್‌ಝಡ್ ಬ್ಯಾಟರಿ ಹೊಂದಿದೆ.
 
ಇಂಟೆಕ್ಸ್ ಆಕ್ವಾ ಸೆನ್ಸ್ 5.1 ಸ್ಮಾರ್ಟ್‌ಪೋನ್‌ಗಳು 1.2 ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್, 512 ಎಮ್‌ಬಿ ರ್ಯಾಮ್, 8 ಜಿಬಿ ರಾಮ್ ಹೊಂದಿದ್ದು, ವೈಟ್, ಷಾಂಪೇನ್ ಮತ್ತು ಗ್ರೇ ಬಣ್ಣದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಈ ಸ್ಮಾರ್ಟ್‌ಪೋನ್‌ಗಳು ಡುಯ್ಯಲ್ ಸಿಮ್ ವೈಶಿಷ್ಟ್ಯವನ್ನು ಹೊಂದಿದ್ದು, ಬ್ಲೂಟೂತ್, ಜಿಪಿಆರ್ಎಸ್/ಎಡ್ಜ್, ಜಿಪಿಎಸ್/ಎ ಜಿಪಿಎಸ್, 3ಜಿ ಮತ್ತು ವೈಫೈ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಏನ್ ಹಿಟ್ಲರಾ?: ಅಂಬರೀಶ್ ಗುಡುಗು