ನವದೆಹಲಿ: ಡಾಲರ್ ಎದುರು ಭಾರತೀಯ ರೂಪಾಯಿ ಸರ್ವಕಾಲಿಕ ದಾಖಲೆಯ ಕುಸಿತ ಕಂಡಿದ್ದು ಇದಕ್ಕೆ ಕಾರಣವೇನು ಎಂಬ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.
ಇದೀಗ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ 87 ರೂ.ಗೆ ತಲುಪಿದೆ. ಸೋಮವಾರ ಮತ್ತೆ 55 ಪೈಸೆಗಳಷ್ಟು ಕುಸಿತ ಕಂಡಿದೆ. ಇದು ದಾಖಲೆಯಾಗಿದೆ. ಕಳೆದ ಕೆಲವು ದಿನಗಳಿಂದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಾಣುತ್ತಲೇ ಇದೆ.
ಎರಡು ದಿನದ ಹಿಂದೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಶುರು ಮಾಡಿದ ಬಳಿಕ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯಲು ಆರಂಭವಾಗಿದೆ. ಅಮೆರಿಕಾ ಮತ್ತು ಚೀನಾ ನಡುವಿನ ಸಮರದಲ್ಲಿ ಭಾರತ ಬಡವಾಯಿತು ಎನ್ನಬಹುದು.
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯಲು ಕೆನಡಾ, ಮೆಕ್ಸಿಕೊ ಮತ್ತು ಚೀನಾ ಮೇಲಿನ ಉತ್ಪನ್ನಗಳಿಗೆ ಅಮೆರಿಕಾ ಶೇ.25 ರಷ್ಟು ಸುಂಕ ಹೇರಿದ್ದು ಪ್ರಮುಖ ಕಾರಣವಾಗಿದೆ. ಚೀನಾ ಎಐ ತಂತ್ರಜ್ಞಾನದ ಮೂಲಕ ಅಮೆರಿಕಾ ಷೇರು ಮಾರುಕಟ್ಟೆಗೆ ಹೊಡೆತ ನೀಡಿದರೆ ಇತ್ತ ಅಮೆರಿಕಾ ಸುಂಕದ ಮೂಲಕ ತಿರುಗೇಟು ನೀಡಿದೆ. ಆದರೆ ಇದರ ನಡುವೆ ಪೆಟ್ಟು ಬಿದ್ದಿದ್ದು ಭಾರತಕ್ಕೆ. ಜಾಗತಿಕ ಮಾರುಕಟ್ಟೆಗಳ ಕುಸಿತ ಹಾಗೂ ಭಾರತದ ಮಾರುಕಟ್ಟೆಯಿಂದ ವಿದೇಶೀ ಹೂಡಿಕೆ ಹಿಂತೆಗತದಿಂದ ರೂಪಾಯಿ ಮೌಲ್ಯ ಕುಸಿದಿದೆ.