Select Your Language

Notifications

webdunia
webdunia
webdunia
webdunia

ಮೋದಿ ಸರಕಾರ ಕೇವಲ ಬೊಗಳುತ್ತದೆ: ಚೀನಾ ಉತ್ಪನ್ನ ನಿಷೇಧಕ್ಕೆ ಪ್ರತಿಕ್ರಿಯೆ

ಮೋದಿ ಸರಕಾರ ಕೇವಲ ಬೊಗಳುತ್ತದೆ: ಚೀನಾ ಉತ್ಪನ್ನ ನಿಷೇಧಕ್ಕೆ ಪ್ರತಿಕ್ರಿಯೆ
ಬೀಜಿಂಗ್ , ಬುಧವಾರ, 19 ಅಕ್ಟೋಬರ್ 2016 (16:55 IST)
ಭಾರತೀಯ ಸಾಮಾಜಿಕ ಜಾಲ ತಾಣಗಳಲ್ಲಿ ಚೀನಾ ದೇಶದ ಉತ್ಪನ್ನಗಳನ್ನು ನಿಷೇಧಿಸುವಂತೆ ಸಂದೇಶಗಳು ಹರಿದಾಡುತ್ತಿವೆ. ಭಾರತೀಯ ಉತ್ಪನ್ನಗಳು ಚೀನಾ ಉತ್ಪನ್ನಗಳೊಂದಿಗೆ ಗಣಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಸರಕಾರಿ ಸ್ವಾಮ್ಯದ ಮಾಧ್ಯಮಗಳು ಪ್ರಕಟಿಸಿವೆ.
 
ಭಾರತ ಸರಕಾರ ಕೇವಲ ಬೊಗಳುತ್ತದೆ. ಬೊಗಳುವುದರಿಂದ ಏನು ಸಾಧಿಸಲು ಸಾಧ್ಯವಿಲ್ಲ. ಉಭಯ ದೇಶಗಳ ನಡುವೆ ನಡೆಯುತ್ತಿರುವ ವಹಿವಾಟು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ.
 
ಪಾಕಿಸ್ತಾನ ಮೂಲದ ಉಗ್ರರನ್ನು ಅಂತಾರಾಷ್ಟ್ರೀಯ ಮಟ್ಟದ ಉಗ್ರರು ಎಂದು ಘೋಷಿಸಬೇಕು ಎನ್ನುವ ಭಾರತ ಸರಕಾರದ ಒತ್ತಡಕ್ಕೆ ಚೀನಾ ವಿರೋಧಿಸುತ್ತಿರುವುದರಿಂದ ಚೀನಾ ಉತ್ಪನ್ನಗಳನ್ನು ನಿಷೇಧಿಸಿ ಪಾಠ ಕಲಿಸಬೇಕು ಎನ್ನುವ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಅವಾಸ್ತವಿಕ. ಚೀನಾ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಬಾರದು. ಭ್ರಷ್ಟಾಚಾರದಲ್ಲಿ ಹೆಚ್ಚಳ ಮತ್ತು ಕಠಿಣ ಪರಿಶ್ರಮ ತೋರದ ಉದ್ಯೋಗಿಗಳಿರುವ ಭಾರತದಲ್ಲಿ ಹಣ ಹೂಡಿಕೆ ಮಾಡುವುದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.
 
ಭಾರತ ಇನ್ನೂ ರಸ್ತೆ ಮತ್ತು ಹೆದ್ದಾರಿಗಳನ್ನು ನಿರ್ಮಿಸಬೇಕಾಗಿದೆ. ದೇಶದಲ್ಲಿ ವಿದ್ಯುತ್ ಮತ್ತು ನೀರಿನ ಕೊರತೆಯಿದೆ. ಭಾರತದ ಪ್ರತಿಯೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಗುಂಡಿಟ್ಟು ಕೊಂದ ತುರ್ಕಿ ರಾಜಕುಮಾರನಿಗೆ ಗಲ್ಲು