Webdunia - Bharat's app for daily news and videos

Install App

ದಿಡೀರ್ ಏರಿಕೆ ಕಂಡ ಷೇರು ಮಾರುಕಟ್ಟೆ: ಎಲ್ಲಾ ಚಂದ್ರಬಾಬು ನಾಯ್ಡು ಮಹಿಮೆ

Krishnaveni K
ಬುಧವಾರ, 5 ಜೂನ್ 2024 (15:36 IST)
ಮುಂಬೈ: ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ನಿನ್ನೆ ಯಾವುದೇ ಪಕ್ಷ ಬಹುಮತ ಸಾಧಿಸದೇ ಇದ್ದಾಗ ಷೇರು ಮಾರುಕಟ್ಟೆ ದಿಡೀರ್ ಇಳಿಕೆ ಕಂಡಿತ್ತು. ಆದರೆ ಇಂದು ಷೇರು ಮಾರುಕಟ್ಟೆ ಮತ್ತೆ ಏರಿಕೆ ಕಾಣುತ್ತಿದೆ. ಇದಕ್ಕೆಲ್ಲಾ ಚಂದ್ರಬಾಬು ನಾಯ್ಡು ಮಹಿಮೆಯೇ ಕಾರಣ.

ಎಕ್ಸಿಟ್ ಪೋಲ್ ಫಲಿತಾಂಶ ಬಂದ ಮೇಲೆ ಷೇರು ಮಾರುಕಟ್ಟೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಆದರೆ ನಿನ್ನೆ ಲೋಕಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೇ ಭಾರೀ ಇಳಿಕೆಯಾಗಿತ್ತು.

ಆದರೆ ಇಂದು ಅಪರಾಹ್ನದ ನಂತರ ಸೆನ್ಸೆಕ್ಸ್ ದಿಡೀರ್ 2200 ಪಾಯಿಂಟ್ ದಾಟಿದೆ. ನಿನ್ನೆಗಿಂತ ಇಂದು 3.08% ಏರಿಕೆ ಕಂಡಿದೆ. ಇನ್ನು, ನಿಫ್ಟಿ ಬ್ಯಾಂಕ್ 2000 ಪಾಯಿಂಟ್ ದಾಟಿದೆ. ನಿಫ್ಟಿ ಫಿಫ್ಟಿ 702 ಗಳಷ್ಟಾಗಿದೆ.  ನಿನ್ನೆಗಿಂತ ನಿಫ್ಟಿ ಬ್ಯಾಂಕ್ 4 ಪರ್ಸೆಂಟ್ ಏರಿಕೆ ಕಂಡಿದೆ. ಬೆಳಿಗ್ಗಿನ ಅವಧಿಯಲ್ಲಿ 200 ಪಾಯಿಂಟ್ ಗಳಷ್ಟೇ ಏರಿಕೆಯಿತ್ತಷ್ಟೆ. ಇದೀಗ ಇಷ್ಟರ ಮಟ್ಟಿಗೆ ಏರಿಕೆಯಾಗಿರುವುದಕ್ಕೆ ಚಂದ್ರಬಾಬು ನಾಯ್ಡು ಎನ್ ಡಿಎಗೆ ಬೆಂಬಲ ಘೋಷಿಸಿರುವುದೇ ಕಾರಣ.

ಬಿಜೆಪಿಗೆ ಬಹುಮತ ಬಾರದ ಹಿನ್ನಲೆಯಲ್ಲಿ ಸರ್ಕಾರ ರಚನೆಗೆ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬೆಂಬಲ ನೀಡುತ್ತಿದ್ದಾರೆ. ಇದರ ಬಗ್ಗೆ ಇಂದು ಅವರು ಅಧಿಕೃತವಾಗಿ ಘೋಷಣೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮೋದಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದು, ಶನಿವಾರ ಮತ್ತೆ ಪ್ರಮಾಣ ವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಮತ್ತೆ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವುದು ಪಕ್ಕಾ ಆಗುತ್ತಿದ್ದಂತೇ ಷೇರು ಮಾರುಕಟ್ಟೆಯಲ್ಲಿ ಮತ್ತೆ ಏರಿಕೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟರ್ಕಿ ಮೇಲೆ ಒಂದೊಂದೆ ಪ್ರತೀಕಾರ ತೀರಿಸುತ್ತಿರುವ ಭಾರತ: ವಿಮಾನಯಾನ ಸಂಸ್ಥೆಯ ಲೈಸನ್ಸ್‌ ರದ್ದು ಮಾಡಿದ ಭಾರತ

ಸೋಫಿಯಾ ಖುರೇಷಿ ವಿರುದ್ಧ ವಿವಾದಾತ್ಮಕ ಹೇಳಿಕೆ: ಬೆಳಗಾವಿಯಲ್ಲಿ ವಿಜಯ್ ಶಾ ವಿರುದ್ಧ ದೂರು

ಸೇನಾಧಿಕಾರಿ ಖುರೇಷಿ ಅತ್ತೆ ಮಾವನ ಮನೆ ಮೇಲೆ ದಾಳಿ ಪೋಸ್ಟ್‌: ಮೂವರ ವಿರುದ್ಧ ಪ್ರಕರಣ ದಾಖಲು

ಬರ್ತಡೇ ಆಚರಿಸಲ್ಲ ಅಂತಾ ಹೇಳಿ ನೆನಪಿನಲ್ಲಿ ಉಳಿದುಕೊಳ್ಳುವ ಹಾಗೇ ದಿನ ಕಳೆದ ಡಿಸಿಎಂ ಡಿಕೆ ಶಿವಕುಮಾರ್‌: Video

ಪಾಕ್‌ಗೆ ಸಹಾಯ ಮಾಡಿದ ಟರ್ಕಿ: ಟರ್ಕಿ ಆ್ಯಪಲ್ ಬ್ಯಾನ್ ಮಾಡಲು ಭಾರತದಲ್ಲಿ ಹೆಚ್ಚಿದ ಒತ್ತಾಯ

ಮುಂದಿನ ಸುದ್ದಿ
Show comments