Select Your Language

Notifications

webdunia
webdunia
webdunia
webdunia

ರು.5 ಕ್ಕೆ 50 ರು. ಟಾಕ್‌ ಟೈಮ್‌, ಇದು ದೀಪಾವಳಿ ಹಬ್ಬದ ಕೊಡುಗೆ

ಐಡಿಯಾ
ಬೆಂಗಳೂರು , ಬುಧವಾರ, 26 ಅಕ್ಟೋಬರ್ 2016 (10:07 IST)
ಬೆಂಗಳೂರು: ದೀಪಗಳ  ಹಬ್ಬ ದೀಪಾವಳಿ ಎಲ್ರಿಗೂ ಮುದ ನೀಡ್ತಾವೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆಯೆಯ ಎಲ್ಲಾ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ನೀಡಲಾಗುತ್ತದೆ. ದೀಪಾವಳಿ ಅನ್ನೋದು ಮಾರುಕಟ್ಟೆ ಕ್ಷೇತ್ರಕ್ಕೆ ಒಂಥರ ಯುದ್ಧ ಇದ್ದ ಹಾಗೆ. ಎಲ್ಲೆಲ್ಲೂ ಆಫರ್‌, ಡಿಸ್ಕೌಂಟ್‌ಗಳ ಪೈಪೋಟಿ. ಆ ಪೈಪೋಟಿ ಈಗ ಟೆಲಿಕಾಂ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಮೊಬೈಲ್ ಗ್ರಾಹಕರ ಉಮೇದಿಗೆ ಎಲ್ಲೇ ಇಲ್ಲವಾಗಿದೆ. ಹೆಚ್ಚಿನ ಟ್ಯಾರಿಫ್ ಮತ್ತು ಡಾಟಾ ಪ್ಲಾನ್ ಡಿಸ್ಕೌಂಟ್‌ಗಳನ್ನು ನೀಡುವ ಮೂಲಕ ಹಬ್ಬದ ಉತ್ಸಾಹಕ್ಕೆ ಇನ್ನಷ್ಟು ಮೆರಗು ಹಚ್ಚಿದೆ.
 

 
ಕೆಲವು ಮೊಬೈಲ್ ಕಂಪನಿಗಳು ತನ್ನ ಗ್ರಾಹಕರು ಬೇರೆ ಕಂಪನಿಗೆ ಹೋಗಿ ಬಿಟ್ಟಾರೂ ಎನ್ನುವ ಭಯದಿಂದ ಈ ಆಫರ್ ನೀಡುತ್ತಿದೆ. ಬಿ.ಎಸ್‌.ಎನ್‌.ಎಲ್‌ ಇತ್ತೀಚೆಗೆ ದಿಪಾವಳಿ ಬೊನಾಜಾ ಆಫರ್‌ ಅನ್ನು, ತನ್ನ ಪ್ರೀಪೇಡ್‌ ಗ್ರಾಹಕರಿಗೆ ಶೇ. 10 ರಷ್ಟು ಹೆಚ್ಚುವರಿ ಡಾಟಾ ಮತ್ತು ಟಾಕ್ ಟೈಮ್‌ ಮೂಲಕ ನೀಡಿದೆ. ಈ ಆಫರ್ ಪೈಪೋಟಿಯಲ್ಲಿ ಐಡಿಯಾ ಸಹ ಹೊಸ ಪ್ಲಾನ್‌ ಗಳೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿ, ಓಂದಷ್ಟು ಹೊಸ ಹೊಸ ಯೋಜನೆಯನ್ನು ಪ್ರಕಟಿಸಿದೆ.
 
ಐಡಿಯಾ ಸಿಮ್ ಅಪ್‌ಗ್ರೇಡ್‌ ಮಾಡಿ ಉಚಿತ 2GB 4G ಡಾಟಾ ಪಡೆಯುವುದು ಹೇಗೆ?
 ಐಡಿಯಾ 'Yaari Dosti Recharge' ಎಂಬ ಹೊಸ ಪ್ಲಾನ್ ಅನ್ನು ದಿಪಾವಳಿ ಪೂರ್ವವೇ ಪ್ರಕಟಗೊಳಿಸಿದೆ. ಈ ಆಫರ್‌ ಅಡಿಯಲ್ಲಿ ಐಡಿಯಾ ಪ್ರೀಪೇಡ್‌ ಗ್ರಾಹಕರು ಕೇವಲ 5 ರು.ಗೆ 50 ರು. ಟಾಕ್‌ ಟೈಮ್‌ ಪಡೆಯಬಹುದಾಗಿದೆ. ಅದು ಹೇಗೆಂದು ತಿಳಿಯಬೇಕೆಂದರೆ ಮತ್ತು ಐಡಿಯಾ ಗ್ರಾಹಕರು ರು.5 ಕ್ಕೆ 50 ರು. ಟಾಕ್‌ ಟೈಮ್‌ ಪಡೆಯಲು ಈ ಕೆಳಗಿನ ಹಂತಗಳನನ್ನು ಫಾಲೋ ಮಾಡಿ.
 
1. ನಿಮ್ಮ ಐಡಿಯಾ ಪ್ರೀಪೇಡ್ ನಂಬರ್‌ನಿಂದ *563*5# ನಂಬರ್ ಡಯಲ್‌ ಮಾಡಿ. 
2. ನಂಬರ್ ಡಯಲ್‌ ಮಾಡಿದ ನಂತರ ಒಂದು ಪಾಪಪ್‌ ನೋಟಿಫಿಕೇಶನ್ ಸ್ಕ್ರೀನ್‌ ನಲ್ಲಿ ತೆರೆದುಕೊಳ್ಳುತ್ತದೆ. ಆಗ ಅದನ್ನು 'Ok' ಮಾಡಿ.
3. ನಂತರ ನಿಮಗೊಂದು ಮೆಸೇಜ್‌ ಬರುತ್ತದೆ. ಅದರಲ್ಲಿ 'Final Confirmation: Paayein Rs 50 ka Muft Recharge !! Subscribe Kijiye Criket pack @ Rs 5/day press 9 to Activate" ಎಂದು ಇರುತ್ತದೆ.
4. ಮೆಸೇಜ್‌ನಲ್ಲಿ ತಿಳಿಸಿದಂತೆ 9 ಕ್ಲಿಕ್ ಮಾಡಬೇಕು.
5. 9 ಕ್ಲಿಕ್ ಮಾಡಿದ ನಂತರ ನಿಮ್ಮ ಮೇನ್‌ ಬ್ಯಾಲೆನ್ಸ್‌ ನಲ್ಲಿ ರು. 5 ಡಿಡಕ್ಟ್ ಆಗುತ್ತದೆ.
6. ನಂತರ ನೀವು ಪ್ಯಾಕ್‌ ಆಕ್ಟಿವೇಟ್ ಆದ ಮೆಸೇಜ್‌ ಅನ್ನು ಆಕ್ಟಿವೇಟ್‌ ಆಗಿದೆ ಎಂದು ಮೆಸೇಜ್ ಮೂಲಕ ಪಡೆಯುತ್ತೀರಿ.
ಈ ವಿಶೇಷ ಯೋಜನೆ ಒಬ್ಬ ಗ್ರಾಹಕನಿಗೆ ಒಂದು ಬಾರಿ ಮಾತ್ರ ಲಭ್ಯವಿದೆ.  ಆಯ್ಕೆಯಾದ ರಾಜ್ಯಗಳಲ್ಲಿ ಮಾತ್ರ ಈ ಆಫರ್ ಇದ್ದು, ಪೋಸ್ಟ್‌ಪೇಡ್‌ ಗ್ರಾಹಕರಿಗೆ ಲಭ್ಯವಿಲ್ಲ. ಅಂದಹಾಗೆ ನಿಮ್ಮ ಐಡಿಯಾ ನಂಬರ್‌ಗೆ ಕ್ರಿಕೆಟ್ ಅಪ್‌ಡೇಟ್‌ ಅಗತ್ಯವಿಲ್ಲದಿದ್ದಲ್ಲಿ, ಡಿಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದ್ದು, 155223 ಗೆ ಒಂದು ಮೆಸೇಜ್‌ ಸೆಂಡ್ ಮಾಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮರ್ಯಾದೆ ಇದ್ದವ್ರು ರೆಡ್ಡಿ ಮಗಳ ಮದ್ವೆಗೆ ಹೋಗಲ್ಲ