ಹಾಂಗ್ ಕಾಂಗ್ ಮೂಲದ ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆ ಐಬೆರ್ರಿ, ಇಬೇ ಸಂಸ್ಥೆಯ ಸಹಯೋಗದಲ್ಲಿ ಭಾರತದ ಮಾರುಕಟ್ಟೆಗೆ ಆಕ್ಸಸ್ 4-ಎಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ 15,999 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ.
ಆಕ್ಸಸ್ 4-ಎಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಹೊಸ ಪೀಳಿಗೆಯ 4ಜಿಬಿ ಡಿಡಿಆರ್‌ಐಐಐ ರ್ಯಾಮ್ ಜೊತೆಗೆ ಹೆಲಿಯೋ ಪಿ 10 ಪ್ರೊಸೆಸರ್ ಹೊಂದಿದೆ. ಈ ಆವೃತ್ತಿಯ ಪೋನ್‌ಗಳು 32 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, 128 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
ಆಕ್ಸಸ್ 4-ಎಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್ 5.5 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ, 3000 ಎಮ್ಎಎಚ್ ಬ್ಯಾಟರಿ ಹಾಗೂ ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ವೈಶಿಷ್ಟ್ಯತೆ ಒಳಗೊಂಡಿದೆ.
ಈ ಹೊಸ ಆವೃತ್ತಿಯ ಪೋನ್‌ಗಳು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಹಾಗೂ ಎಲ್‌ಇಡಿ ಫ್ಲ್ಯಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.
ಜೊತೆಗೆ ಹಲವು ವಿಶೇಷತೆಗಳನ್ನು ಹೊಂದಿರುವ ಈ ಪೋನ್‌ನಲ್ಲಿ ಇ-ಟಚ್, ಬ್ಲ್ಯಾಕ್ ಸ್ಕ್ರೀನ್ ಗೆಶ್ಚರ್ ಸೌಲಭ್ಯಗಳು ಸಹ ಲಭ್ಯವಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ