Select Your Language

Notifications

webdunia
webdunia
webdunia
webdunia

ಎಚ್‌ಟಿಸಿಯಿಂದ ನೂತನ ಆವೃತ್ತಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಎಚ್‌ಟಿಸಿಯಿಂದ ನೂತನ ಆವೃತ್ತಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2016 (12:25 IST)
ಥೈವಾನ್ ಮೂಲದ ಗ್ರಾಹಕ ಎಲೆಕ್ಟ್ರಾನಿಕ್ ಕಂಪೆನಿ ಎಚ್‌ಟಿಸಿ ಒನ್ ಎ-9 ಸ್ಮಾರ್ಟ್‌ಫೋನ್‌ನ ನೂತನ ಆವೃತ್ತಿಯನ್ನು, ಸೆಪ್ಟೆಂಬರ್ ತಿಂಗಳಲ್ಲಿ  ಬರ್ಲಿನ್‌ನಲ್ಲಿ ನಡೆಯಲಿರುವ ಐಎಫ್‌ಎ ಟ್ರೇಡ್‌ ಶೋ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ. 
 
ಈ ಹೊಸ ಆವೃತ್ತಿಯ ಡಿವೈಸ್, ಒನ್‌ ಎ-9 ಆವೃತ್ತಿಯ ಮೂಲ ವಿನ್ಯಾಸದಂತೆಯೇ ಕಾಣಿಸಿಕೊಳ್ಳುವ ನಿರೀಕ್ಷೆ ಇದ್ದು, ಇವುಗಳ ರಿಯರ್ ಹಾಗೂ ಫ್ರಂಟ್ ಕ್ಯಾಮೆರಾಗಳಲ್ಲಿ ಸ್ವಲ್ಪ ಬದಲಾವಣೆಯಾಗಲಿದೆ ಎಂದು ಖಾಸಗಿ ವೆಬ್‌ಸೈಟ್ ವರದಿ ಮಾಡಿದೆ. 
 
ಆಪಲ್ ಸರಣಿಯಂತೆಯೇ, ಎಚ್‌ಟಿಸಿ ಸಂಸ್ಥೆ ಸಹ ಸರಣಿಗಳಲ್ಲಿ ಸ್ಮಾರ್ಟ್‌ಪೋನ್ ಬಿಡುಗಡೆಗೊಳಿಸಲು ನಿರ್ಧರಿಸಿದ್ದು, ಈ ಆವೃತ್ತಿಯ ಪೋನ್‌ಗಳಿಗೆ ಎ9-ಎಸ್ ಹೆಸರಿಡುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತದೆ.   
 
ಒನ್-ಎ9 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳಲ್ಲಿ ಯಾವ ವೈಶಿಷ್ಟ್ಯದ ಪ್ರೊಸೆಸರ್ ಬಳಸಲಾಗುತ್ತಿದೆ. ಹಾಗೂ ಅವುಗಳ ಕ್ಯಾಮೆರಾದಲ್ಲಿ ಯಾವ ತರಹದ ಬದಲಾವಣೆಯಾಗಿದೆ ಎನ್ನುವುದರ ಕುರಿತು ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. 
 
ಈ ಆವೃತ್ತಿಯ ಮೂಲ 13 ಮೆಗಾ ಪಿಕ್ಸೆಲ್ ಕ್ಯಾಮೆರಾದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, 4 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿದ್ದ ಫ್ರಂಟ್ ಕ್ಯಾಮೆರಾದಲ್ಲಿ ಸ್ವಲ್ಪ ಬದಲಾವಣೆ ಮಾಡಿ 5 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಾ ಆರೆಸ್ಸೆಸ್ ಅಧ್ಯಕ್ಷ ಸುಭಾಶ್ ವೆಲಿಂಗ್‌ಕರ್‌ ವಜಾಕ್ಕೆ ಗೋವಾ ಮುಖ್ಯಮಂತ್ರಿ ವಿಷಾದ