Select Your Language

Notifications

webdunia
webdunia
webdunia
webdunia

ಆದಾಯ ತೆರಿಗೆ ಪಾವತಿಯಲ್ಲಿ ಈ ನಟನ ನಂತರವೇ ಎಲ್ಲರೂ!

ಆದಾಯ ತೆರಿಗೆ ಪಾವತಿಯಲ್ಲಿ ಈ ನಟನ ನಂತರವೇ ಎಲ್ಲರೂ!
Mumbai , ಶುಕ್ರವಾರ, 23 ಡಿಸೆಂಬರ್ 2016 (14:26 IST)
ಇತ್ತೀಚೆಗೆ ಬಿಡುಗಡೆಯಾಗಿದ್ದ ಮೊಹೆಂಜೋದಾರೋ ಚಿತ್ರ ಬಾಕ್ಸ್ ಆಫೀಸಲ್ಲಿ ಸೋತು ಸುಣ್ಣ ಆಯಿತು. ಹೃತಿಕ್ ರೋಷನ್ ಕೆರಿಯರ್ ಮುಗೀತು ಎಂದುಕೊಂಡವರೇ ಅಧಿಕ ಮಂದಿ. ಆದರೆ ಆದಾಯ ತೆರಿಗೆಯನ್ನು ಕೋಟಿಗಳಲ್ಲಿ ಪಾವತಿಸುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್.
 
ಸದ್ಯಕ್ಕೆ ಕಾಬಿಲ್ ಚಿತ್ರದಲ್ಲಿ ಹೃತಿಕ್ ಅಭಿನಯಿಸುತ್ತಿದ್ದು, ಈಗಾಗಲೆ ಈ ಚಿತ್ರದ ಟ್ರೇಲರ್ ಸೂಪರ್ ಹಿಟ್ ಆಗಿದೆ. ಚಿತ್ರದ ಬಗ್ಗೆ ಬೇಜಾನ್ ಹೈಪ್ ಕ್ರಿಯೇಟ್ ಆಗಿದೆ. ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಗೆ ರೂ.80 ಕೋಟಿ ಮುಂಗಡ ತೆರಿಗೆ ಪಾವತಿಸಿದ್ದಾರೆ. ಸಿನಿಮಾಗಳ ಜೊತೆಗೆ ಜಾಹೀರಾತುಗಳಲ್ಲೂ ಹೃತಿಕ್ ತೊಡಗಿಕೊಂಡಿದ್ದು, ಅದರಿಂದ ಬಂದ ಆದಾಯಕ್ಕೆ ತೆರಿಗೆ ಕಟ್ಟಿದ್ದಾರೆ ಎನ್ನುತ್ತವೆ ಮೂಲಗಳು.
 
ಕಳೆದ ವರ್ಷ ರು.50 ಕೋಟಿ ಮುಂಗಡ ತೆರಿಗೆ ಪಾವತಿಸಿದ್ದರು. ಈ ವರ್ಷ ಅವರ ತೆರಿಗೆ ಮೊತ್ತ ರು.30 ಕೋಟಿ ಹೆಚ್ಚಾಗಿದೆ. ಹೃತಿಕ್ ನಂತರದ ಸ್ಥಾನದಲ್ಲಿ ಅಮೀರ್ ಖಾನ್ ಇದ್ದಾರೆ. ಈ ವರ್ಷ ಅವರು ರು.72 ಕೋಟಿ ಮುಂಗಡ ತೆರಿಗೆ ಪಾವತಿಸಿದ್ದಾರೆ. ರಣಬೀರ್ ಕಪೂರ್ ರು.37 ಕೋಟಿ, ಸಲ್ಮಾನ್ ಖಾನ್ ರು.14 ಕೋಟಿ, ಅಕ್ಷಯ್ ಕುಮಾರ್ ರು.10 ಕೋಟಿ ತೆರಿಗೆ ಕಟ್ಟುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ರಂಪ್ ಪುತ್ರಿ ಕಿಚಾಯಿಸಿದ್ದಕ್ಕೆ ವಿಮಾನದಿಂದ ಹೊರದಬ್ಬಿದರು