Select Your Language

Notifications

webdunia
webdunia
webdunia
webdunia

ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸಪ್ ಖಾತೆ ಬಳಸುವುದು ಗೊತ್ತೇ?

ಒಂದೇ ಮೊಬೈಲ್‌ನಲ್ಲಿ ಎರಡು ವಾಟ್ಸಪ್ ಖಾತೆ ಬಳಸುವುದು ಗೊತ್ತೇ?
ನವದೆಹಲಿ , ಶುಕ್ರವಾರ, 6 ಮೇ 2016 (11:01 IST)
ಡ್ಯುಯಲ್ ಸಿಮ್ ಸ್ಮಾರ್ಟ್‌ಪೋನ್‌ಗಳು ಯಾವುದೇ ಅಡೆತಡೆಯಿಲ್ಲದೆ ಬಳಕೆದಾರರನ್ನು ತೃಪ್ತಿಗೊಳಿಸಿದೆ. ಇದೀಗ, ಬಳಕೆದಾರರು ಕರೆ ಮತ್ತು ಸಂದೇಶಕ್ಕಾಗಿ ಪ್ರತ್ತೇಕ ಪೋನ್‌ಗಳನ್ನು ಕ್ಯಾರಿ ಮಾಡುವ ಅವಶ್ಯಕತೆ ಇಲ್ಲ.
ಆದಾಗ್ಯೂ, ಬಳಕೆದಾರರು ಒಂದೇ ಪೋನ್‌ನಲ್ಲಿ ಎರಡು ವಾಟ್ಸಪ್ ಖಾತೆ ಹೊಂದಲು ಸಾಧ್ಯವಿಲ್ಲ. ವಾಟ್ಸಪ್, ಒಂದು ಡಿವೈಸ್‌ ಮೂಲಕ ಒಂದೇ ಸಮಯದಲ್ಲಿ ಒಂದು ಖಾತೆಯನ್ನು ಮಾತ್ರ ಇನ್‌ಸ್ಟಾಲ್ ಮಾಡುಲು ಅನುಮತಿಸುತ್ತದೆ. ಅಂದರೆ, ಒಂದು ಡಿವೈಸ್‌ನಲ್ಲಿ ಒಂದೆ ವಾಟ್ಸಪ್ ಖಾತೆಯನ್ನು ಬಳಸಬಹುದಾಗಿದೆ. 
 
ಡ್ಯುಯಲ್ ಸಿಮ್ ಸ್ಮಾರ್ಟ್‌ಪೋನ್‌‌ನಲ್ಲಿ ಎರಡು ವಾಟ್ಸಪ್ ಖಾತೆ ಬಳಸಲು ಈ ಕ್ರಮಗಳನ್ನು ಅನುಸರಿಸಿ.
 
* ನಿಮ್ಮ ಸ್ಮಾರ್ಟ್‌ಪೋನ್‌ನಲ್ಲಿ ಥರ್ಡ್ ಪಾರ್ಟಿ ವಾಟ್ಸಪ್ ಅಪ್ಲಿಕೇಶನ್‌ (ಥರ್ಡ್ ಪಾರ್ಟಿ ವಾಟ್ಸಪ್ ಅಪ್ಲಿಕೇಶನ್‌ ಆನ್‌ಲೈನ್‌ನಲ್ಲಿ ಲಭ್ಯವಿದೆ) ನೋಂದಣಿ ಮಾಡಿಕೊಳ್ಳಿ.
 
* ಲ್ಯಾಪ್‌ಟಾಪ್ ಮತ್ತು ಕಂಪ್ಯೂಟರ್ ಮೂಲಕ ಥರ್ಡ್ ಪಾರ್ಟಿ ವಾಟ್ಸಪ್ ಅಪ್ಲಿಕೇಶನ್‌ ಡೌನ್‌ಲೋಡ್ ಮಾಡಿಕೊಳ್ಳ ಬಹುದು.
 
* ನೀವು ಡೌನ್‌ಲೋಡ್ ಮಾಡಿಕೊಂಡಿರುವ ಅಪ್ಲಿಕೇಶನ್‌ನ್ನು ನ್ಯೂ ಎಪಿಕೆ ಮೂಲಕ ಸ್ಕ್ಯಾನ್ ಮಾಡಿ.
 
* ಇದು ಅಪ್ಲಿಕೇಶನ್‌ ಇನ್‌ಸ್ಟಾಲ್ ಮಾಡುಲು ಅವಕಾಶ ಮಾಡಿಕೊಡುತ್ತದೆ.
 
* ಬಹಳಷ್ಟು ಆಂಡ್ರಾಯಡ್ ಪೋನ್‌ಗಳು ಭದ್ರತಾ ಉದ್ದೇಶದಿಂದ ಥರ್ಡ್ ಪಾರ್ಟಿ ವಾಟ್ಸಪ್ ಅಪ್ಲಿಕೇಶನ್‌ ಇನ್‌ಸ್ಟಾಲೇಶನ್‌ನ್ನು ಅನುಮತಿಸುವುದಿಲ್ಲ. 
 
* ಅಪ್ಲಿಕೇಶನ್‌ ಇನ್‌ಸ್ಟಾಲೇಶನ್ ಮಾಡುವಾಗ ಅಡೆತಡೆ ಉಂಟಾದರೆ, ನಿಮ್ಮ ಪೋನ್‌ ಸೆಟ್ಟಿಂಗ್‌ನಲ್ಲಿರುವ ಸೆಕ್ಯೂರಿಟಿ ಸೆಕ್ಸೆನ್‌ಗೆ ತೆರಳಿ ಅನ್‌ಕ್ನೌನ್ ಸೋರ್ಸ್‌ನ್ನು ಸಕ್ರಿಯಗೊಳಿಸಿ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಆಟೋದಲ್ಲಿ ಗ್ಯಾಂಗ್ ರೇಪ್ ಪ್ರಕರಣ: ಮೂವರ ಬಂಧನ